
ಉದಯವಾಹಿನಿ ಇಂಡಿ: ಸಿoದಗಿ ತಾಲ್ಲೂಕುಗಳಲ್ಲಿ ಬರಗಾಲದ ತೀವೃತೆ ಇರುವುದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ರೈತರ ಜೊತೆ ನಾವೆಲ್ಲ ಇರಬೇಕಾಗುತ್ತದೆ. ನೀರಿನ ಹಾಹಾಕಾರ ಇರುವುದರಿಂದ ಎಲ್ಲರಿಗೂ ಸಮಾಧಾನ ಮಾಡಲು ಆಗದಿದ್ದರೂ, ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರಾಮಾಣ ಕವಾಗಿ ಮಾಡೋಣ ಎಂದು ರಾಂಪೂರ ಕೆಬಿಜೆಎನ್‌ಎಲ್ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.ಇಂಡಿ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಕಾಲುವೆಗಳಿಗೆ ನೀರು ಹರಿಸುವ ಕುರಿತು ಕೆಬಿಜೆಎನ್‌ಎಲ್ ಹಾಗೂ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಳೆಗಾಲ ಬರುವವರೆಗೆ ಮತ್ತು ಬರದ ತೀವೃತೆ ಕಡಿಮೆ ಆಗುವವರೆಗೆ ಇಲಾಖೆಯ ಅಧಿಕಾರಿಗಳು ಸಾರ್ವತ್ರಿಕ ರಜೆ ಸೇರಿದಂತೆ ವಯಕ್ತಿಕ ರಜೆವೂ ಕೂಡಾ ಯಾರೂ ತೆಗೆದುಕೊಳ್ಳಬಾರದು. ರಾತ್ರಿ, ಹಗಲು ಎನ್ನದೇ ಕಾಲುವೆಯ ಮೇಲೆ ಓಡಾಡಿ ರೈತರಿಗೆ ಸಾಧ್ಯವಾದಷ್ಟು ನೀರು ತಲುಪಿಸುವ ಕೆಲಸ ಮಾಡಬೇಕು. ಕಾಲುವೆಯ ಕೊನೆಯ ಹಂತದ ವರೆಗೂ ನೀರು ಒದಗಿಸುವ ಪ್ರಮಾಣ ಕ ಕೆಲಸ ನಾವೆಲ್ಲರೂ ಮಾಡೋಣ ಎಂದು ಹೇಳಿದರು.ನೀರಿನ ಕೊರತೆಯಿಂದ ರೈತರು ಹೇಗೆ ಕಷ್ಟಪಡುತ್ತಿದ್ದಾರೆ ಎಂಬುದನ್ನು ಅರಿತು ಅವರ ಕಷ್ಟದಲ್ಲಿ ನಾವೂ ಪಾಲ್ಗೊಳ್ಳುವ ಹಾಗೆ ರಾತ್ರಿ ನಿದ್ರೆ ಇಲ್ಲದೇ ಕಷ್ಟಪಟ್ಟು ನೀರು ಹರಿಸುವ ಕೆಲಸ ಮಾಡಬೇಕು. ಕಾಲುವೆಯಲ್ಲಿ ನೀರು ಹರಿಯದಂತೆ ಯಾರಾದರೂ ತೊಂದರೆ ನೀಡುತ್ತಿದ್ದರೆ, ಅಂತವರ ಬಗ್ಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಪೊಲೀಸ್ ಸಹಾಯ ಪಡೆದುಕೊಂಡು ಕಾಲುವೆಗಳಿಗೆ ನೀರು ಹರಿಯುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.ರೈತರ ತೊಂದರೆಯಲ್ಲಿ ನಾವು ಭಾಗಿಯಾಗಿ, ಅವರಿಗೆ ಸಾಧ್ಯವಾದಷ್ಟು ನೀರು ಒದಗಿಸುವ ಕೆಲಸ ಮಾಡಬೇಕು. ಯಾವ ಭಾಗದ ರೈತರಿಗೂ ಅನ್ಯಾಯ ಆಗದಂತೆ ಎಲ್ಲರಿಗೂ ನೀರು ಒದಗಿಸುವ ಪ್ರಯತ್ನ ಮಾಡಬೇಕು. ಬರದಲ್ಲಿ ರೈತರು ಬೆಳೆಯ ರಕ್ಷಣೆಯ ಜೊತೆಗೆ ಜನ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಕೆಲಸವೂ ಆಗಬೇಕು ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯ ಎಇಇ ಎಸ್.ಆರ್.ರುದ್ರವಾಡಿ ಮಾತನಾಡಿ, ಭೀಕರ ಬರಗಾಲ ಇರುವುದರಿಂದ ಗ್ರಾಮೀಣ, ಜನವಸತಿ ಪ್ರದೇಶಗಳಿಗೆ ಜನ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕಾಗಿರುವುದು ಅನಿವಾರ್ಯವಾಗಿದ್ದರಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಸಂಬAಧಿಸಿದ ಕೆರೆಗಳನ್ನು ಕಾಲುವೆಗಳ ಮೂಲಕ ನೀರು ತುಂಬಿಸಿ ಕುಡಿಯುವ ನೀರಿಗೆ ತೊಂದರೆಯಾಗದoತೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ತಿಳಿಸಿದರು. ಎಇಇ ವಿಜಯಕುಮಾರ, ಸಂತೋಷ ಕಾಟೆ, ಪೋಳ್, ಅಂಗಡಿ ಸೇರಿದಂತೆ ಝಳಕಿ, ಆಲಮೇಲ ಉಪವಿಭಾಗದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
