
ಉದಯವಾಹಿನಿ, ಔರಾದ್ : ಔರಾದ್ ಮತ್ತು ಕಮಲನಗರ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವುದಕ್ಕೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ತಾಲೂಕಿನಲ್ಲಿ ಸುತ್ತಾಡುವ ಮೂಲಕ ರೈತರ ಸಮಸ್ಯೆ ಆಲಿಸಿದ್ದೇನೆ. ಬಳಿಕ ಸಮಗ್ರ ವರದಿ ಸಿದ್ಧಪಡಿಸುವ ಮೂಲಕ ಸರಕಾರಕ್ಕೆ ಮನವರಿಕೆ ಮಾಡಲಾಗಿದೆ. ಇದರಿಂದಾಗಿ ಔರಾದ್ ಮತ್ತು ಕಮಲನಗರ ತಾಲೂಕು ಬರಗಾಲ ಪೀಡಿತ ಪ್ರದೇಶ ಘೋಷಣೆಯಾಗಿ ಅನುದಾನ ಬಂದಿದೆ ಎಂದಿದ್ದಾರೆ.ಸಿಎಂ ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡುವ ಮೂಲಕ ಕ್ಷೇತ್ರದ ಎಲ್ಲ ಸನಸ್ಯೆಗಳು ಹೇಳಿದ್ದೇನೆ. ರೈತರ ಬೆಳೆಗಳು ನಾಶವಾಗಿರುವ ಎಲ್ಲ ದಾಖಲೆಗಳು ತೋರಿಸುವ ಮೂಲಕ ಔರಾದ್, ಕಮಲನಗರ ಬರಗಾಲ ಪೀಡಿತ ಘೋಷಣೆಗೆ ಮನವಿ ಮಾಡಿದ್ದೇನೆ. ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ , ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕುಡಾ ಬರಗಾಲ ಘೋಷಣೆಗೆ ಸಹಕರಿಸಿದ್ದಾರೆ. ಔರಾದ್ ತಾಲೂಕು ರೈತ ಸಂಘದ ಪದಾಧಿಕಾರಿಗಳು ನಮ್ಮೊಂದಿಗೆ ಸಹಕಾರ ನೀಡಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ ಎಂದರು.
ಕಾಂಗ್ರೆಸ್ ಸರಕಾರ ರೈತರ ಪರವಾದ ಸರಕಾರವಿದೆ. ಆದ್ದರಿಂದ ಇಲ್ಲಿಯ ರೈತರ ಸಮಸ್ಯೆಗೆ ಸ್ಪಂದಿಸಿದೆ. ರೈತರು ಧೈರ್ಯವಾಗಿ ಇರಬೇಕು ನಿಮ್ಮೊಂದಿಗೆ ಕಾಂಗ್ರೆಸ್ ಸರಕಾರವಿದೆ. ಕ್ಷೇತ್ರದಲ್ಲಿ ಸುತ್ತಾಡುವ ಜತೆಗೆ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ತ್ವರಿತ ಕೆಲಸ ಮಾಡುವಂತೆ ತಿಳಿಸಲಾಗಿದೆ. -ಡಾ. ಭೀಮಸೇನರಾವ ಸಿಂಧೆ
