
ಉದಯವಾಹಿನಿ ಮಸ್ಕಿ: ಪಟ್ಟಣದ ಕೆಲ ಬಡವಾಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಆರ್.ಬಸನಗೌಡ ತುರವಿಹಾಳ ಅವರು ಭೂಮಿ ಪೂಜೆ ನೆರವೇರಿಸಿದರು. ಪಟ್ಟಣದಲ್ಲಿ ಮಂಗಳವಾರ ಪುರಸಭೆ ವ್ಯಾಪ್ತಿಯಲ್ಲಿನ 14, 15 ಮತ್ತು 22ನೇ ಬಡಾವಣೆಯಲ್ಲಿ ಸಿ.ಸಿ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸರಕಾರದ ವಿವಿಧ ಯೋಜನೆಗಳಿಂದ ಅನುದಾನ ತಂದು, ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿ,ಸುಂದರ ಪಟ್ಟಣವನ್ನಾಗಿಸುತ್ತೇನೆ, ಅಧಿಕಾರಿಗಳು, ಗುತ್ತಿಗೆದಾರರು ಮರ್ತುವರ್ಜಿವಹಿಸಿ ನಿಗಧಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಹೇಳಿದರು. ಪಟ್ಟಣದ ವಿವಿಧ ಬಡವಾಣೆಗೆ ತೆರಳಿ ಚರಂಡಿ ವೀಕ್ಷಣೆ ಮಾಡಿದರು, ಚರಂಡಿಯಲ್ಲಿ ಅಸ್ವಚ್ಚತೆಯಿಂದ ಕೂಡಿದ್ದು, ಚರಂಡಿ ಸ್ವಚ್ಚಗೊಳಿಸಿ ಪರಿಸರ ಕಾಪಾಡಿಕೊಳ್ಳಬೇಕೆಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು, ಈ ಸಂದರ್ಭದಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಜಿ.ಪಂ. ಮಾಜಿ ಅಧ್ಯಕ್ಷ ಶ್ರೀಶೈಲಪ್ಪ ಬ್ಯಾಳಿ, ಮುಖಂಡ ಮೈಬುಸಾಬ ಮುದ್ದಾಪೂರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಚಿಗರಿ, ಮುಖಂಡ ಕರಿಬಸನಗೌಡ ಗುಡದೂರು, ಮಲ್ಲಯ್ಯ ಬಳ್ಳಾ,ರಾಜಾಸಾಬ, ವೀರಭದ್ರ ಅಂಗಡಿ, ನಿಸ್ಸಾರ ಅಹ್ಮದ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಸೇರಿದಂತೆ ಪುರಸಭೆ ಸದಸ್ಯರು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
