ಉದಯವಾಹಿನಿ, ವಿಜಯಪುರ: ಕೆಲವು ತಿಂಗಳುಗಳಿಂದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಹಮಾಸ್ ಭಯೋತ್ಪಾದಕರ ನಡುವೆ ಯುದ್ಧ ನಡೆಯುತ್ತಿದೆ.ಇದು ಭೀಕರ ಪರಿಣಾಮ ಬೀರಿದೆ.ಎರಡೂ ಕಡೆಯ ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ, ಹಲವು ಯೋಧರು ಹುತಾತ್ಮರಾಗಿದ್ದಾರೆ.ಅಪಾರ ಆಸ್ತಿ ಪಾಸ್ತಿಗೆ ಹಾನಿಯಾಗಿದೆ.
ಇವೆಲ್ಲದರ ನಡುವೆ ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ಘೋಷಣೆ ಕೂಗುವುದು, ಭಿತ್ತಿ ಚಿತ್ರಗಳ ಪ್ರದರ್ಶಿಸುವುದು ಮುಂತಾದ ಘಟನೆಗಳು ಕರ್ನಾಟಕದಲ್ಲಿ ನಡೆಯುತ್ತಿದೆ. ನಿನ್ನೆ ವಿಜಯಪುರದಲ್ಲಿ ಜಮ್ಮಾ ಮಸೀದಿ ರಸ್ತೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ್ದಾರೆ.ಫಲಕಗಳನ್ನು ಪ್ರದರ್ಶಿಸಿದ್ದಾರೆ.
