ಉದಯವಾಹಿನಿ, ನವದೆಹಲಿ : ಅಬಕಾರಿ ನೀತಿ ಅನುಷ್ಠಾನ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದರೆ, ಅವರು ಜೈಲಿನಿಂದ ಸರ್ಕಾರ ನಡೆಸುತ್ತಾರೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಅಧಿಕಾರಿಗಳು ಮತ್ತು ಸಚಿವ ಸಂಪುಟದ ಸಚಿಚರು ಸಭೆಗಳಿಗೆ ಹಾಜರಾಗಲು ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ.
ಮದ್ಯ ನೀತಿ ಹಗರಣದಲ್ಲಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ದೆಹಲಿ ಶಾಸಕಾಂಗ ಸಭೆ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ನವೆಂಬರ್ ೨ ರಂದು ಜಾರಿ ನಿರ್ದೇಶನಾಲಯ ಮುಂದೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಅಕ್ಟೋಬರ್ ೩೦ ರಂದು ಸಮನ್ಸ್ ನೀಡಲಾಯಿತು, ಮುಖ್ಯಮಂತ್ರಿಗಳು ಅವರನ್ನು “ಅಕ್ರಮ” ಮತ್ತು “ರಾಜಕೀಯ ಪ್ರೇರಿತ” ಎಂದಿದ್ದಾರೆ.
ದೆಹಲಿಯ ನಿವಾಸಿಗಳು ನೀಡಿದ ಜನಾದೇಶವನ್ನು ಹೊಂದಿರುವ ಅರವಿಂದ್ ಕೇಜ್ರಿವಾಲ್ ಅವರು ಒಂದು ವೇಳೆ ಜೈಲಿಗೆ ಹೋದರೆ ಅಲ್ಲಿಂದಲೇ ಸರ್ಕಾರವನ್ನು ನಡೆಸುತ್ತಾರೆ ಎಂದು ಶಾಸಕರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
