ಉದಯವಾಹಿನಿ,ಚಿಂಚೋಳಿ: ಕನ್ನಡಕ್ಕೆ 2500 ವರ್ಷಗಳ ಇತಿಹಾಸವಿದೆ,ಕನ್ನಡ ಭಾಷೆ ಕ್ರಿ.ಶ.405ರಲ್ಲಿ ಕಲ್ಯಾಣ ಕರ್ನಾಟಕ ಸಂಸ್ಕೃತಿ ದೇಶದಲ್ಲಿಯೇ ಹೆಸರುವಾಸಿಯಾಗಿತ್ತು ಎಂದು ಚಿಮ್ಮನಚೋಡ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ನರನಾಳ ಹೇಳಿದರು.ತಾಲ್ಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ಸ್ವರಸಂಗಮ ಸಾಂಸ್ಕೃತಿಕ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್,ದ್ವೀತಿಯ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ 68ನೇ ಕನಾ೯ಟಕ ರಾಜ್ಯೋತ್ಸವದ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಕಲಿಯೋಕೆ ನೂರು ಭಾಷೆ ಆದರೆ ಆಡುವುದಕ್ಕೆ ಒಂದೇ ಕನ್ನಡ ಭಾಷೆ ಆಡಬೇಕು.ಹಿಂದಿ ಭಾಷೆಗೂ ಹಾಗೂ ಕನ್ನಡ ಭಾಷೆಗೂ ಸುಮಾರು 500ವರ್ಷಗಳ ವ್ಯತ್ಯಾಸವಿದ್ದು,22 ಭಾಷೆಗಳು ರಾಷ್ಟ್ರೀಯ ಭಾಷೆಗಳಾಗಿವೆ,ಕನ್ನಡಕ್ಕೆ 8ಜ್ಞಾನಪೀಠ ಪ್ರಶಸ್ತಿ ದೊರಕಿವೆ,ಆಲೂರ ವೆಂಕಟರಾಯರು ಕರ್ನಾಟಕ ಏಕೀಕರಣ ಬಗ್ಗೆ ಹೆಚ್ಚಿನ ಗಮನಹರಿಸಿದರು ಎಂದರು.ಸ್ವರಸಂಗಮ ಸಾಂಸ್ಕೃತಿಕ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು ರಮೇಶ ಭೂತಪೂರ ಮಾತನಾಡಿ ಸಂಘವು ನಡೆದ ಬಂದ ದಾರಿ ವಿವರಿಸಿದ ಅವರು ವಿವಿಧ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸನ್ಮಾನ ಮಾಡುತ್ತಿದ್ದು ಇದರಿಂದ ಪ್ರಶಸ್ತಿ ಪುರಸ್ಕೃತರಿಗೆ ಇನಷ್ಟು ಜವಾಬ್ದಾರಿ ಹೆಚ್ಚುತ್ತದೆ ಹಾಗೂ ಉತ್ತಮ ಕೆಲಸ ಮಾಡಲು ಇನಷ್ಟು ಹುರುಪು ಬರುತ್ತದೆ ಎಂದರು.ಗಾನಯೋಗಿ ಪಂಚಾಕ್ಷರಿ ಕಲಾ ಸಂಘದ ಅಧ್ಯಕ್ಷ ರಾಮಯ್ಯಸ್ವಾಮಿ ಐನೋಳಿ ಅಧ್ಯಕ್ಷತೆ ವಹಿಸಿದ್ದರು.ಬಿಂದುಶ್ರೀ ನಾಡಗೀತೆ ಹಾಡಿದರು,ಶರಣು ಭಕ್ತಂಪಳ್ಳಿ ಸ್ವಾಗತಿಸಿದರು, ರೇವಣಸಿದ್ದಯ್ಯ ಸ್ವಾಮಿ ನಿರೂಪಿಸಿದರು,ರಾಮರೆಡ್ಡಿ ಚಿಮ್ಮನಚೋಡ ವಂದಿಸಿದರು.ಈ ಸಂದರ್ಭದಲ್ಲಿ ಬೀದರ ನಿವೃತ್ತ ವೈಧ್ಯಾಧೀಕಾರಿ ಡಾ.ಸಿಎಸ್ ರಗಟೆ,ಚಿಮ್ಮನಚೋಡ ಗ್ರಾಪಂ ಪಿಡಿಓ ಗೋವಿಂದರೆಡ್ಡಿ,ಗ್ರಾಪಂ ಉಪಾಧ್ಯಕ್ಷ ರೇಷ್ಮಾ ರಾಜಕುಮಾರ,ಸಂಗಾರೆಡ್ಡಿ,ಜಗನ್ನಾಥ ಶೇರಿಕಾರ,ಜಗದೀಶ ಮರಪಳ್ಳಿ,ಶಿವಕುಮಾರ ಪೋಚಾಲಿ,ನಿಲೇಶ ಪಾಟೀಲ,ಸಂತೋಷ ಸಾಳುಂಕೆ,ಸಿದಲಿಂಗ ದುಬಲಗುಂಡಿ,ಅನೇಕರಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ
ಸ್ವರಸಂಗಮ ಸಾಂಸ್ಕೃತಿಕ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು 1)ವೈಧ್ಯಕೀಯ ಕ್ಷೇತ್ರದಲ್ಲಿ ಡಾ.ಸಿ.ಎಸ್.ರಗಟೆ,2)ಶಿಕ್ಷಣ ಕ್ಷೇತ್ರ ನರಸಪ್ಪ ಮಾಸ್ಟರ್ ಕೊಡದೂರ,3)ಸಂಗೀತ ಕ್ಷೇತ್ರ ತುಕ್ಕಾರಾಮ ಭಕ್ತಂಪಳ್ಳಿ,4) ರಂಗಭೂಮಿ ಕ್ಷೇತ್ರ ಶಿವಕುಮಾರ ಹಿರೆಮಠ,5)ಸಾಹಿತ್ಯ ಕ್ಷೇತ್ರ ನಿಜಲಿಂಗ ರಗಟೆ,6)ಕೃಷಿ ಕ್ಷೇತ್ರ ಬಕ್ಕಾರೆಡ್ಡಿ ಪೋಲಿಸ ಪಾಟೀಲ ಎಲ್ಲಾ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!