ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನಲ್ಲಿ ಅವಧಿ ಮುಗಿದು ಹೋಗಿರುವ ಔಷಧಿ ಹಾಗೂ ಆಹಾರ ಪದಾರ್ಥಗಳಾಗಲಿ ಮತ್ತು ತಂಪುಪಾನೀಯಗಳಾಗಲಿ,ದಿನನಿತ್ಯ ಬಳಕೆಗೆ ಜೀವನ ಉಪಯೋಗಿಸುವ ಸೇವಿಸುವ ಪದಾರ್ಥಗಳಾಗಲಿ ಅವಧಿ ಮುಗಿದ ಮೇಲೆಯೂ ತಾಲ್ಲೂಕಿನಲ್ಲಿ ಮಾರಾಟ ಮಾಡುತ್ತಿದ್ದು ಸಂಬಂಧಿಸಿದ ಉನ್ನತಮಟ್ಟದ ಅಧಿಕಾರಿಗಳು ಜಾಗೃತಗೊಂಡು ಕ್ರಮಕೈಗೋಳ್ಳಬೇಕು ಇಲ್ಲಾದಿದ್ದರೆ ಕರವೇ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲ್ಲೂಕಾಧ್ಯಕ್ಷ ಸಚಿನ್ ಚವ್ಹಾಣ ಆಗ್ರಹಿಸಿದರು. ಪತ್ರಿಕಾ ಪ್ರಕಟನೆ ಹೊರಡಿಸಿದ ಅವರು, ಅವಧಿ ದಿನಾಂಕ ಮುಕ್ತಾಯವಾದರು ಮಾರಾಟಗಾರರು ವಿಲೇವಾರಿ ಮಾಡದೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಉನ್ನತಮಟ್ಟದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣರಾಗಿದ್ದಾರೆ.ದೇಹಕ್ಕೆ ಸೇವಿಸುವ ಯಾವುದೇ ಆಹಾರ ಪದಾರ್ಥವಾಗಲಿ,ಔಷಧಿ ಮತ್ತು ಇನ್ನೀತರ ವಸ್ತುಗಳು ಅವಧಿ ಮುಗಿದು ಹೋದರೆ ನಂತರ ವಿಷ ಪದಾರ್ಥವಾಗಿ ಮಾರ್ಪಾಡುವಾಗುತ್ತದೆ ಇದರಿಂದ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಹೀಗೆ ತಾಲೂಕಿನಲ್ಲಿ ಹಲವು ಕಡೆ ಅವಧಿ ಮುಗಿದು ಹೋಗಿರುವ ಆಹಾರ ಪದಾರ್ಥಗಳನ್ನು,ತಂಪ್ಪು ಪಾನೀಯಗಳು, ಜಾಷಧಿಗಳು ಮಾರಾಟ ಕಂಡು ಬರುತ್ತಿದೆ.ಹೀಗಾಗಿ ಸಂಬಂಧಪಟ್ಟ ತಾಲೂಕು ದಂಡಾಧಿಕಾರಿಗಳು,ಆಹಾರ ಇಲಾಖೆ ಅಧಿಕಾರಿಗಳು,ಪುರಸಭೆ ಅಧಿಕಾರಿಗಳು,ತಾಲೂಕು ವೈದ್ಯಾಧಿಕಾರಿಗಳು ಕೂಡಲೇ ಜಾಗೃತ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ಎಲ್ಲಾ ಅಂಗಡಿ ಮುಗ್ಗಟ್ಟು ಆಸ್ಪತ್ರೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಕ್ರಮವನ್ನು ಕೈಗೊಳ್ಳಬೇಕು.ಇಲ್ಲಾದಿದ್ದರೆ ಅವಧಿ ಮುಗಿದು ಹೋದ ಔಷಧಿ,ಆಹಾರ ಪದಾರ್ಥ ಹಾಗೂ ಇನ್ನೀತರ ದಿನನಿತ್ಯ ಬಳಸುವ ವಸ್ತುಗಳಿಂದ ಅವಘಡ ಸಂಭವಿಸಿದರೆ ಸಂಭಂದಪಟ್ಟ ಇಲಾಖೆಗಳು ಜವಾಬ್ದಾರರು ಎಂದು ಹೋರಾಟ ರೂಪಿಸಿಕೊಳ್ಳಲಾಗುವುದು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!