
ಉದಯವಾಹಿನಿ ನಾಗಮಂಗಲ: ಪರಿಸರ ಸಂರಕ್ಷಣೆ ಹಾಗೂ ಆರೋಗ್ಯದ ಹಿತ ಕಾಪಾಡುವಲ್ಲಿ ವಾಯು ಮಾಲಿನ್ಯ ತಡೆಯುವಲ್ಲಿ ನಮ್ಮಗಳ ಜವಾಬ್ದಾರಿ ಮುಖ್ಯವಾಗಿದೆ ಎಂದು ಎ ಆರ್ ಟಿ ಓ ಮಲ್ಲಿಕಾರ್ಜುನ್ ರವರು ಸಲಹೆ ನೀಡದರು.ಅವರು ನಾಗಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಉದ್ಘಾಟಿಸಿ ಮಾತನಾಡಿದರು. ವಾಯುಮಾಲಿನ್ಯ ತಡೆಯುವಲ್ಲಿ ಪರಿಸರ ಸಂರಕ್ಷಣೆಗೆ ಮತ್ತು ಸಮಾಜದ ಪರಿಸರದ ಮೇಲಿನ ಮುಂದಿನ ದಿನದ ಪರಿಸರದ ಮೇಲಿನ ಅಗಾಧ ಪರಿಣಾಮಗಳನ್ನು ಮಿತಿಗೊಳಿಸಲು ಹಾಗೂ ನಾವು ನಮ್ಮಗಳ ಆರೋಗ್ಯದ ಕಡೆ ಹೆಚ್ಚು ಗಮನ ನೀಡುವ ಮುಖಾಂತರ ಪರಿಸರ ಮಾಲಿನ್ಯದ ನಿಯಂತ್ರಣ ಮಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕಾಗುತ್ತದೆ ಇದರಿಂದ ನಾವು ಉಳಿಯಲು ಸಾಧ್ಯ. ಪರಿಸರ ಮಾಲಿನ್ಯ ಮಾಡದ ಹಾಗೆ ಬದುಕು ಸಾಗಿಸಬೇಕು ಎಂದು ಹಿರಿಯ ಮೋಟಾರ್ ವಾಹನಗಳ ನಿರೀಕ್ಷಕರಾದ ಸಿ ಎಸ್ ಸತೀಶ್ ಮಾತನಾಡಿದರು. ವಾಯು ಮಾಲಿನ್ಯ ಪ್ರಮುಖವಾಗಿ ತಡೆಯುವಲ್ಲಿ ನಮ್ಮಗಳ ವಾಹನ ಅಗತ್ಯಕ್ಕೆ ತಕ್ಕಂತೆ ವಾಹನಗಳ ಬಳಕೆ ಮಾಡುವುದರೊಂದಿಗೆ ಹಾಗೂ ಕಾಲಕಾಲಕ್ಕೆ ವಾಹನಗಳನ್ನು ಸುಸ್ಥಿತಿಯಲ್ಲಿಡಲು ಪರಿಶೀಲಿಸುವ ಮುಖಾಂತರ ಪರಿಸರದ ಮೇಲೆ ಅಗಾಧವಾದ ಪರಿಣಾಮ ಬೀರದಂತೆ ವಾಯುಮಾಲಿನ್ಯ ತಡೆಯಲು ನಾವುಗಳು ಹೆಚ್ಚು ಒತ್ತು ನೀಡುವ ಮುಖಾಂತರ ಪರಿಸರ ಸಂರಕ್ಷಣೆ ಸಮೃದ್ಧಿ ಪರಿಸರ ಬೆಳೆಸಲು ಸಾಧ್ಯವಾಗುತ್ತದೆ ಎಂದು ಅಧೀಕ್ಷಕರಾದ ಸತೀಶ್ ರವರು ಈ ಸಂದರ್ಭದಲ್ಲಿ ತಿಳಿಸಿದರು.ಸಮಾರಂಭದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ರಾಜೇಶ್ ಹಾಗೂ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಅನೇಕ ಗಣ್ಯರು ಹಾಜರಿದ್ದರು.
