ಉದಯವಾಹಿನಿ, ಬೆಂಗಳೂರು: ಪ್ರಮುಖ ಜಾಗತಿಕ ಇಂಜಿನಿಯರಿಂಗ್ ಸಂಸ್ಥೆಯಾದ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ(ಐಇಟಿ)ಯಲ್ಲಿ ನಡೆದ “ಭಾರತದಲ್ಲಿ ಇಂಜಿನಿಯರ್‌ಗಳಿಗಿರುವ ಕರ‍್ಸ್‌ಗಳು ಭವಿಷ್ಯದಲ್ಲಿ ಎಐ” ವಿಷಯದ ಕುರಿತು ಸಂವಾದ ಕರ‍್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಖ್ಯಾತ ಉದ್ಯಮ ತಜ್ಞರಿಂದ ಹೊಸ ಶಕ್ತಿಗಳ ಕುರಿತು ರ‍್ಚೆ, ಐಇಟಿ ಇಂಡಿಯಾ ಪ್ರಶಸ್ತಿ ವಿತರಣೆ ಮತ್ತು ಐಇಟಿ ವಿದ್ಯರ‍್ಥಿವೇತನ ವಿಜೇತರ ಘೋಷಣೆ ಕರ‍್ಯಕ್ರಮದ ಮುಖ್ಯಾಂಶಗಳಾಗಿತ್ತು.ಜಾಗತಿಕ ಎಂಜಿನಿಯರಿಂಗ್ ಸಂಸ್ಥೆಯ ಮೊದಲ ಭಾರತೀಯ ಅಧ್ಯಕ್ಷರೂ ಆಗಿರುವ ಟೆಕ್ ಅನುಭವಿ ಮತ್ತು ಮೈಲಿನ್ ಫೌಂಡ್ರಿಯ ಸಂಸ್ಥಾಪಕ ಡಾ.ಗೋಪಿಚಂದ್ ಕಾತ್ರಗಡ್ಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಎಐ ಉಜ್ವಲ ಭವಿಷ್ಯ ಹೊಂದಿದೆ. ೧೦೦ ಮಿಲಿಯನ್ ಉದ್ಯೋಗ ಸೃಷ್ಟಿಸುತ್ತದೆ” ಎಂದರು.
ಹೊಸ ಭಾರತಕ್ಕಾಗಿ ಹೊಸ ಶಕ್ತಿಗಳು” ಎಂಬ ವಿಷಯದ ಮೇಲೆ ದುಂಡುಮೇಜಿನ ರ‍್ಚೆ ಕೂಡ ನಡೆಯಿತು. ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಅತ್ಯಾಧುನಿಕ ಪರಿಹಾರಗಳು, ತ್ಯಾಜ್ಯನೀರನ್ನು ಬಳಸಿಕೊಳ್ಳುವುದು, ಶಕ್ತಿಯ ಪರಿರ‍್ತನೆಯಲ್ಲಿ ಹೈಡ್ರೋಜನ್ ಪಾತ್ರ, ಚಲನಶೀಲತೆಗೆ ನವೀಕರಿಸಬಹುದಾದ ಶಕ್ತಿ ಮತ್ತು ಶಕ್ತಿ ಉತ್ಪಾದನೆ, ಎಐ ಬಳಕೆಗಳ ಕುರಿತು ರ‍್ಚಿಸಲಾಯಿತು.

Leave a Reply

Your email address will not be published. Required fields are marked *

error: Content is protected !!