
ಉದಯವಾಹಿನಿ, ಔರಾದ್ : ಬಸವಕಲ್ಯಾಣದಲ್ಲಿ ನವೆಂಬರ್ 25, 26ರಂದು ನಡೆಯಲಿರುವ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಕಾರ್ಯಕ್ರಮದ ಹಿನ್ನೆಲೆ ತಾಲೂಕು ಮಟ್ಟದ ವಚನ ವಿಶ್ಲೇಷಣೆ, ವಚನ ಗಾಯನ ಹಾಗೂ ವಚನ ಭಾವಾರ್ಥ ಬರಹ ಸ್ಪರ್ಧೆ ಆಯೋಜಿಸಿದೆ ಎಂದು ಪ್ರವಚನಕಾರ ಪ್ರಕಾಶ ದೇಶಮುಖ ಹೇಳಿದರು.ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸ್ಪರ್ಧೆಯ ಪ್ರಚಾರಾರ್ಥ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, 6ನೇ ತರಗತಿಯಿಂದ 10ನೇ ತರಗತಿಯವರೆಗೆ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಪ್ರಥಮ ಒಂದು ಸಾವಿರ, ದ್ವೀತಿಯ 500 ಹಾಗೂ ತೃತೀಯ ಸ್ಥಾನಕ್ಕೆ 300 ರೂ. ಬಹುಮಾನ ನೀಡಲಾಗುವುದು ಎಂದರು.ಬಸವ ಗುರುಕುಲ ಪ್ರೌಢಶಾಲೆ ಮುಖ್ಯ ಶಿಕ್ಷಕಿ ನಿರ್ಮಲಾ ಶೇರಿ ಮಾತನಾಡಿ, ವಚನ ಗಾಯನ, ವಚನ ಭಾಷಣ ಹಾಗೂ ವಚನ ಭಾವಾರ್ಥ ಬರವಣಿಗೆ ಹೀಗೆ ಮೂರು ಹಂತದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಉಚಿತ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಪ್ರತಿ ಮಗು ಪಾಲ್ಗೊಳ್ಳಲು ಮುಂದಾಗಬೇಕು ಎಂದರು.ಗ್ರಾಮದ ಹಿರಿಯರಾದ ಮಲ್ಲಿಕಾರ್ಜುನ ಹಿಪ್ಪಳಗಾವೆ, ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ನಾಗನಾಥ ಶಂಕು, ಬಾಲಾಜಿ ಅಮರವಾಡಿ, ಅಂಕುಶ ಪಾಟೀಲ್, ವೀರಶೆಟ್ಟಿ ಗಾದಗೆ, ರೂಪಾ, ಸಿದ್ದೇಶ್ವರಿ ಸ್ವಾಮಿ ಇದ್ದರು.
