
ಉದಯವಾಹಿನಿ,ಚಿಂಚೋಳಿ: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಹಳಿ ನಿರ್ಮಾಣ ಕಾಮಗಾರಿ ಹಾಗೂ ಹಸಿರು ಕ್ರಾಂತಿ ಹರಿಕಾರ ಜಗಜೀವನರಾಮ್ ಕಾಮಗಾರಿಯನ್ನು ಶಾಸಕ ಡಾ.ಅವಿನಾಶ ಜಾಧವ ಅವರು ವಿಕ್ಷಣೆ ಮಾಡಿದರು.ನಂತರ ಮಾತನಾಡಿದ ಅವರು,ಕಾಮಗಾರಿಯು ಒಳ್ಳೆಯ ಗುಣಮಟ್ಟದಿಂದ ಮಾಡಬೇಕು ಯಾವುದೇ ಲೋಪವಾಗದೆ ದೂರುಗಳು ಬರದಂತೆ ಕ್ರೀಯಾಯೋಜನೆ ತಕ್ಕಂತೆ ಗುತ್ತಿಗೆದಾರರು ಕೆಲಸ ಮಾಡಬೇಕು ಹಾಗೂ ಶೀಘ್ರದಲ್ಲೇ ಕೆಲಸ ಮಾಡಬೇಕು ಕಾಮಗಾರಿಯ ಲೋಪದೋಷಗಳನ್ನು ಪುರಸಭೆಯ ಮುಖ್ಯಾಧಿಕಾರಿಗಳು ಪರೀಶೀಲನೆ ಮಾಡುತ್ತಾ ಇರಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಜೆಇ ದೇವೀಂದ್ರಪ್ಪಾ ಕೋರವಾರ,ಸಂಗಮೇಶ,ಕೆಎಂ.ಬಾರಿ,ಭೀಮಶೇ ಟ್ಟಿ ಮುರುಡಾ,ಶ್ರೀಮಂತ ಕಟ್ಟಿಮನಿ,ಚಂದ್ರಶೇಟ್ಟಿ ಜಾಧವ,ವಿಜಯಕುಮಾರ ರಾಠೋಡ್,ಅಮರ ಲೋಡನೂರ,ಶ್ರೀನಿವಾಸ ಚಿಂಚೋಳಿಕರ್ ಅನೇಕರಿದ್ದರು.
