
ಉದಯವಾಹಿನಿ,ಚಿಂಚೋಳಿ: ಪಟ್ಟಣದ ತಹಸೀಲ್ ಕಛೇರಿಯ ಅವರಣದ ಪಕ್ಕದಲ್ಲಿ ನೂತನವಾಗಿ ಬಿಸಿಎಂ ವಸತಿ ನಿಲಯ ಪ್ರಾರಂಬಿಸಿದ್ದು ವಸತಿನಿಲಯಕ್ಕೆ ಹೋಗಲು ರಸ್ತೆ,ಬೀದಿ ದ್ವೀಪ ಇಲ್ಲದ ಕಾರಣ ವಿಧ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು ಶೀಘ್ರದಲ್ಲೇ ರಸ್ತೆ ಬೀದಿ ದ್ವೀಪಗಳು ಅಳವಡಿಸುವಂತೆ ಕಲ್ಯಾಣ ಕರ್ನಾಟಕ ಸೈನ್ಯ ತಾಲ್ಲೂಕಾ ಅಧ್ಯಕ್ಷ ಅಜರ್ ಮಸೂದ್ ಸೌದಾಗಾರ ಆಗ್ರಹಿಸಿದರು.
ಪಟ್ಟಣದ ತಹಸೀಲ್ ಕಛೇರಿ ಎದುರು ಕಲ್ಯಾಣ ಕರ್ನಾಟಕ ಸೈನ್ಯ ಸಂಘಟನೆಯು ವಿವಿಧ ಬೇಡಿಕೆ ಈಡೇರಿಸಲು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಶಾಸಕರಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು,ವಸತಿನಿಲಯಕ್ಕೆ ಹೋಗಲು ಬರಲು ರಸ್ತೆಯಿಲ್ಲ,ಬೀದಿ ದ್ವೀಪಗಳಿಲ್ಲ ವಿಧ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಮಳೆ ಸುರಿದರೆ ಸಾಕು ಹೋಗಲು ಬರಲು ಬರುವುದಿಲ್ಲಾ ರಸ್ತೆ ತುಂಬಾ ಕೆಸರುಗದ್ದೆಯಾಗಿ ಮಾರ್ಪಟಿದೆ,ಕಾರಣ ವಿಧ್ಯಾರ್ಥಿಗಳಿಗೆ ವಸತಿನಿಲಯದಿಂದ ಶಾಲೆಗೆ ಹೋಗಲು ಬರಲು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿ ಪಕ್ಕದಲ್ಲಿ ಬೀದಿ ದ್ವೀಪಗಳು ಅಳವಡಿಸಿ ವಿಧ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜಾನ್ಸನ್ ರಾಜ್ ದಂಡೀನ್, ನಿತೀನ್ ನಿರಾಳಕರ,ಆಕಾಶ ಮೇತ್ರಿ,ಯಲ್ಲಾಲಿಂಗ ಕೆರೋಳ್ಳಿ,ಶಿವಾನಂದ,ಆಕಾಶ ತ್ರಿಪಾಠಿ,ಸಚಿನ ಅಣವಾರ,ರಾಕೇಶ ಕಟ್ಟಿ,ಅನೇಕರಿದ್ದರು.
