ಉದಯವಾಹಿನಿ,ಚಿಂಚೋಳಿ: ಕನ್ನಡಿಗರು ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಶ್ರೀಮಂತರು,ಕನ್ನಡ ಭಾಷೆ ಬೆಳವಣಿಗೆಗೆ ಕವಿ-ಸಾಹಿತಿಗಳ ಕೊಡುಗೆ ಅಪಾರವಾಗಿದೆ,ಅನೇಕ ಕನ್ನಡಿಗರ ಹೋರಾಟಗಾರರ ಪರಿಶ್ರಮ ಮತ್ತು ಸಾಧನೆ ನಾವುಗಳು ಸ್ಮರಿಸಬೇಕಿದೆ ಎಂದು ಕಲ್ಬುರ್ಗಿ ನಗರದ ಮನ್ನೂರ ಆಸ್ವತ್ರೆಯ ಮುಖ್ಯಸ್ಥ ಡಾ.ಫಾರೂಕ್ ಮನ್ನೂರ ಹೇಳಿದರು.
ತಾಲ್ಲೂಕಿನ ಮಿರಿಯಾಣ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇಧಿಕೆ ವತಿಯಿಂದ  ಆಯೋಜಿಸಿದ 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ,ಡಾ.ಸ್ಟಾಲಿನ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ಸಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,ಕನ್ನಡ ಭಾಷೆಯಲ್ಲಿನ ವೈವಿದ್ಯತೆ ಮತ್ತು ಬೆಳವಣಿಗೆಗೆ ಕವಿ ಮತ್ತು ಸಾಹಿತಿಗಳ ಕೊಡುಗೆ ಅಪಾರವಾಗಿದೆ.
ಸಾಹಿತ್ಯ ಮತ್ತು ಗೀತೆಗಳ ಮೂಲಕ ಕನ್ನಡ ಭಾಷೆಯಲ್ಲಿನ ಭಾವನೆಗಳ ಜೋತೆಗೆ ಕನ್ನಡಿಗರ ಮನಸ್ಸುಗಳು ಬೇರೆತ್ತಿರುವ ಕಾರಣದಿಂದ ಸ್ವಾಭಿಮಾನಿ ಕನ್ನಡಿಗರಾದ ನಾವುಗಳು ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಶ್ರೀಮಂತರಾಗಿದ್ದೇವೆ ಮೈಸೂರು ರಾಜ್ಯವು ಕರ್ನಾಟಕವೆಂದು ಮರು ನಾಮಕರಣಗೊಂಡು 2023 ನಂ.1ಕ್ಕೆ ಐವತ್ತು ವರ್ಷಗಳು ಪೂರ್ಣಗೊಂಡಿವೆ. ಅಂದಿನಿಂದ ರಾಜ್ಯದಲ್ಲಿ ಕನ್ನಡ ಭಾಷೆ ಮೇರು ಭಾಷೆಯಾಗಿ ಬೆಳೆದಿದೆ,ಕರವೇ ಸಂಘಟನೆಯು ಗಡಿ ಭಾಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಜೋತೆಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.
ತಾಪಂ.ಇಓ ಶಂಕರ ರಾಠೋಡ್ ಮಾತನಾಡಿ ರಾಜ್ಯದಲ್ಲಿ ಕನ್ನಡ ಬಾಷೆ,ನೆಲ,ಜಲ,ಸಾಹಿತ್ಯ,ಕಲೆ,ಸಂಸ್ಕೃತಿ ಸೇರಿದಂತೆ ಪರಿಸರ ಸಂಪನ್ಮೂಲಗಳು ಎಲ್ಲೆಡೆ ಸಮೃದ್ಧಿಯಾಗಿ ಹರಡಿಕೊಂಡಿದೆ. ಶರಣರು,ಕವಿಗಳು,ಸಾಹಿತಿಗಳು,ಕಲಾವಿದರು ಸೇರಿದಂತೆ ಕನ್ನಡ ಪ್ರೇಮಿಗಳು ಮತ್ತು ಹೋರಾಟಗಾರರ ಪರಿಶ್ರಮದಿಂದ ನಾವೆಲ್ಲರೂ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ.
ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸುಂದರ ಪರಿಸರದಲ್ಲಿ ಸಾಧು-ಸಂತರು,ಶಿವಶರಣರು,ಕವಿ-ಸಾಹಿತಿಗಳ ಕನ್ನಡ ಸೇವೆಯಿಂದ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿಯಿದೆ,ಇಂತಹ ಸಮೃದ್ಧ ನಾಡಿನಲ್ಲಿ ಜನಿಸಿರುವುದು ಕನ್ನಡಿಗರ ಅದೃಷ್ಟವಾಗಿದೆ.ನಾವೆಲ್ಲರೂ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಕನ್ನಡಾಂಭೆಗೆ ಗೌರವಾಪೂರ್ವಕವಾಗಿ ಗೀತೆ ಗಾಯನದ ಮೂಲಕ ನುಡಿನಮನ ಸಲ್ಲಿಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಸಿ.ಪಿ.ಐ ಅಂಬರಾಯ ಕಮಾನಮನಿ,ಪಿ.ಎಸ್.ಐ ಎ.ಎಸ್.ಪಟೇಲ್,ಗ್ರಾಪಂ.ಅಧ್ಯಕ್ಷೆ ಪಲ್ಲವಿ ಜಯಶಂಕರ,ಕರವೇ ತಾಲ್ಲೂಕಾ ಅಧ್ಯಕ್ಷ ಸಂಜೀವಕುಮಾರ ಪಾಟೀಲ,ಗ್ರಾಪಂ.ಉಪಾಧ್ಯಕ್ಷೆ ವೆಂಕಟಮ್ಮ ಲಾಲಪ್ಪ,ಡಾ.ಪುಟ್ಟರಾಜ ಬಲ್ಲೂರಕರ್,ಪತ್ರಕರ್ತ ಅಕ್ರಂಪಾಶಾ ‌ಮೋಮಿನ್,ಅಬ್ದುಲ್ ರೌಫ್,ಕೃಷ್ಣಪ್ಪ ಪೂಜಾರಿ,ಸಿದ್ದಯ್ಯ ಗೌಡ್ಸ್,ನಾರಾಯಣ ಗೌಡ್ಸ್,ಜಫಾರ್ ಖಾನ್,ನರಸಿಂಹಮಲು ಪೂಜಾರಿ,ಡಾ.ಬೀರಪ್ಪ ಪೂಜಾರಿ,ಸಿಆರ್.ಪಿ ನಜೀಮುನ್ನಿಸ್ ಬೇಗಂ,ಕಾಶೀನಾಥ ಮಡಿವಾಳ,ಪಾಂಡುರಂಗ ಶರ್ಮ,ಕರವೇ ಮುಖಂಡರಾದ ಅನೀಲ ಕಂಟ್ಲಿ,ಸುಧಾಕರ ಗೌಡ್ಸ್,ಆಂಜಲಯ್ಯ ಗೌಡ್ಸ್,ವೀರಭದ್ರಪ್ಪ ರಾಯಪಳ್ಳಿ,ರಘುವೀರ ಗೌಡ್ಸ್,ಝರಣಪ್ಪ ಪೂಜಾರಿ,ರಾಜಕುಮಾರ ಭಕ್ತಂಪಳ್ಳಿ,ದಿನೇಶ ಗೌಡ್ಸ್,ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!