
ಉದಯವಾಹಿನಿ ಸಿಂಧನೂರು : ಶಿಕ್ಷಕರು ವಿಜ್ಞಾನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಯೋಗಗಳ ಫಲವಾಗಿ ಬೋಧನೆ ಮಾಡಬೇಕು ಎಂದು ಹೇಳಿದರು.ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಅಂತಾರಾಷ್ಟ್ರೀಯ ಫೌಂಡೇಶನ್ ವತಿಯಿಂದ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿಜ್ಞಾನ ಬೋಧನಾ ತರಬೇತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ ಅವರು ವಿದ್ಯಾರ್ಥಿ ಜೀವನ ಎಂಬುದು ಭೂಮಿ ಮೇಲಿನ ಮೊಳಕೆ ಹೊಡೆದ ಬೀಜದಂತೆ. ಏಕೆಂದರೆ ಅವರ ಜೀವನದಲ್ಲಿಯೇ ಒಂದು ವೈಜ್ಞಾನಿಕ ಮನೋಭಾವನೆಯನ್ನು ರೂಡಿಸಿಕೊಳ್ಳಬೇಕು ಮತ್ತು ವಿಜ್ಞಾನ ಶಿಕ್ಷಕರಾದವರು ಕೇವಲ ಬೋಧನೆ ಉಪನ್ಯಾಸಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳು ಮಕ್ಕಳಿಗೆ ಪ್ರಯೋಗಗಳ ಜೊತೆಗೆ ವಿಜ್ಞಾನವನ್ನು ಬೋಧನೆ ಮಾಡಬೇಕು ಮತ್ತು ಪ್ರಾಥಮಿಕ ತಿಳುವಳಿಕೆಯನ್ನು ಮಕ್ಕಳಲ್ಲಿ ಮೂಡಿಸುವ ಮೂಲಕ ಜಾಗೃತರಾಗಿರಬೇಕು ಮತ್ತು ಪ್ರಯೋಗಗಳೊಂದಗೆ ಶಿಕ್ಷಕರ ನಿರಂತರ ಅಧ್ಯಯನ ಮಾಡಬೇಕು ವಿಜ್ಞಾನ ಬೋಧನೆ ಮಾಡುವಂತೆ ಶಿಕ್ಷಕರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳು ಕೊಟ್ಟಡಿಗಳ ಒಳಗೆ ಪ್ರತಿಯೊಬ್ಬರ ತಿಳಿದುಕೊಳ್ಳುವಂತೆ ಮನೋಭಾವ ಬೆಳೆಸಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ವೈಜ್ಞಾನಿಕ ಅಂಶಗಳನ್ನು ತಿಳಿದುಕೊಳ್ಳುವ ಮೂಲಕ ಕಲಿಕೆ ಯಾಗಬೇಕು ಎಂದರು. ಪ್ರಯೋಗದಲ್ಲಿ 40ಕ್ಕೂ ಹೆಚ್ಚು ಪಾಲ್ಗೊಂಡು ಶಿಕ್ಷಕರು*ಕಾರ್ಯಗಾರದಲ್ಲಿ ತಮ್ಮದೇ ವಿಜ್ಞಾನ ಪ್ರಯೋಗಗಳು ಮತ್ತು ಇತರ ಚಟುವಟಿಕೆಗಳನ್ನು ಮಾಡುವುದರ ಮೂಲಕ ತಮ್ಮ ಪ್ರದರ್ಶನಗಳನ್ನು ತೋರಿಸಿ ಕಾರ್ಯಗಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.*ಈ ಸಂದರ್ಭದಲ್ಲಿ ಸರ್ಕಾರಿ ಬಾಲಕರ ಶಾಲೆಯ ಮುಖ್ಯ ಗುರುಗಳಾದ. ಶಮತ ಶರ್ಮಾ ಅಗಸ್ತ್ಯ ಫೌಂಡೇಶನ್ ಮುಖ್ಯಸ್ಥರಾದ ಶಿವ ಗ್ಯಾನಪ್ಪ. ಸಂಪನ್ಮೂಲಗಳು ಚಂದ್ರು ಗೌಡ ಶ್ರೀನಿವಾಸ್ ನೋಡಲ್ ಅಧಿಕಾರಿ ರವಿ ಪವರ್. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿಬ್ಬಂದಿ ವರ್ಗ ಸೇರಿದಂತೆ ಇತರರು ಇದ್ದರು.
