ಉದಯವಾಹಿನಿ,ಶಿಡ್ಲಘಟ್ಟ:ರಾಜ್ಯಾದ್ಯಂತ ಮಳೆ ಇಲ್ಲದೆ ಸರ್ಕಾರ ಈಗಾಗಲೇ ಬರ ಘೋಷಣೆ ಮಾಡಿದೆ, ಇತ್ತಿಚೆಗೆ ಬಿದ್ದ ಅಲ್ಪ ಮಳೆಗೆ ಪಲ್ಲಿಚೇರ್ಲು ಗ್ರಾಮ ಪಂಚಾಯಿತಿಯ ಕನ್ನಪನಹಳ್ಳಿ ಗ್ರಾಮ ವ್ಯಾಪ್ತಿಯ ಅರಣ್ಯದಲ್ಲಿರುವ ಕೆರೆ ಕಟ್ಟೆ ಒಡೆದು ನೀರು ಪೊಲಾಗುತ್ತಿದೆ. ಈ ಕೆರೆಯಿಂದ ಕನ್ನಪನಹಳ್ಳಿ ಕೆರೆ ಮತ್ತು ಪಲಿಚೇರ್ಲು ಕೆರೆಗಳಿಗೆ ಹೆಚ್ಚು ನೀರು ಹರಿಯುತ್ತಿದ್ದು, ಈ ಕೆರೆ ಕಟ್ಟೆ ಒಡೆದುಹೊಗಿ ನೀರು ಪೊಲಾಗುವುದನ್ನು ಸಣ್ಣ ನೀರಾವರಿ ಇಲಾಖೆ ಇದನ್ನ ಸರಿಪಡಿಸುವಂತಹ ಕೆಲಸ ಮಾಡಬೇಕು ಎಂದು ಪಲಿಚೇರ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷಿದೇವಮ್ಮ ತಿಳಿಸಿದರು.ಕಳೆದ ಬಾರಿ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಕಟ್ಟೆ ದುರಸ್ತಿಯಾಗಿದ್ದು, ಕಳಪೆ ಕಾಮಗಾರಿಯಿಂದ ಹೆಚ್ಚುದಿನ ನಿಲ್ಲದೆ ಹಾಳಾಗಿದೆ, ಜಲಮೂಲಗಳು ಅಭಿವೃದ್ಧಿ ಪಡಿಸಿ ನೀರು ಶೇಕರಣೆ ಮಾಡುವುದು ಬಹಳ ಮುಖ್ಯ ಆದ್ದರಿಂದ ಅತೀ ಶೀಘ್ರವಾಗಿ ಕೆರೆಕಟ್ಟೆ ದುರಸ್ತಿಯಾಗಬೇಕಿದೆ ಎಂದು ಅಭಿವೃದ್ಧಿ ಅಧಿಕಾರಿ ಸಿ.ರಮೇಶ್ ತಿಳಿಸಿದರು.ಇತ್ತೀಚೆಗೆ ಬಿದ್ದ ಮಳೆಯಿಂದ ಕೆರೆಕಟ್ಟೆ ಹೊಡೆದು ನೀರು ಪೋಲಾಗುತ್ತಿರುವುದರಿಂದ ರೈತರಿಗೆ ತುಂಬಾ ಅನಾನುಕೂಲವಾಗಲಿದೆ. ರೈತರು ಈಗಾಗಲೇ ಬರಗಾಲದಿಂದ ಸಂಕಷ್ಟಕ್ಕೀಡಾಗಿದ್ದು, ಬಂದಿರುವ ಅಲ್ಪ ನೀರು ಕೆರೆ ಕಟ್ಟೆ ಹೊಡೆದು ಪೋಲಾಗಿದೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಪರಿಹಾರ ಒದಗಿಸಿಕೊಡಬೇಕು ಎಂದರು ಗ್ರಾಮಸ್ಥರು ಒತ್ತಾಯಿಸಿದರು.ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗೋಪಿನಾಥ್, ಕನ್ನಪ್ಪನಹಳ್ಳಿ ಗ್ರಾಮದ ಸದಸ್ಯರಾದ ಲಕ್ಷ್ಮೀನಾರಾಯಣ್, ಗಂಗರತ್ನ, ದೇವರಾಜು, ಊರಿನ ಮುಖಂಡರಾದ ದೇವರಾಜು, ಮಂಜುನಾಥ್ ಹಾಗೂ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!