ಉದಯವಾಹಿನಿ,ಶಿಡ್ಲಘಟ್ಟ: ಕಾಂಗ್ರೆಸ್ ಸರ್ಕಾರ ಹಲವು ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡಿ ಸುಖಾ ಸುಮ್ಮನೆ ಕುಳಿಕೊಂಡರೆ ಸಾಲದು, ಗ್ರೌಂಡ್ ರಿಪೋರ್ಟ್ ಮಾಡಿ ಬರ ಪರಿಹಾರ ಕೂಡಲೇ ಬಿಡುಗಡೆ ಮಾಡಿ ರೈತರನ್ನು ಪಾರು ಮಾಡಬೇಕು ಎಂದು ಶಾಸಕ ಬಿ.ಎನ್ ರವಿಕುಮಾರ್ ಒತ್ತಾಯಿಸಿದರು.ಶಿಡ್ಲಘಟ್ಟ ತಾಲೂಕಿನ ಸಾದಲಿಯ ಗಡಿಮಿಂಚೇನಹಳ್ಳಿಯ ರೈತ ವಿಜಯ್ ಕುಮಾರ್ ಅವರ ಮುಸುಕಿನ ಜೋಳ ತೋಟಕ್ಕೆ ಹಾಗೂ ತಿಮ್ಮನಾಯಕನಹಳ್ಳಿ ಗ್ರಾಮದ ರಾಗಿ ತೋಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆದೇಶದ ಮೇರೆಗೆ ರಾಜ್ಯಾದ್ಯಂತ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ರೈತರ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲು ಜಿಲ್ಲಾ ಮಟ್ಟದ ತಂಡವನ್ನು ರಚಿಸಿ ಬರ ಅಧ್ಯಯನ ನಡೆಯುತ್ತಿದೆ.
ರೈತರಿಗೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರಾಗಿ,ಮುಸುಕಿನ ಜೋಳ,ತೊಗರಿ,ಅವರೆ,ಅಲಸಂದಿ ತರಹೇವಾರು ರೀತಿಯ ಬೆಳೆಗಳು ಒಣಗಿ ಬೆಳೆ ಸಂಪೂರ್ಣ ಕೈಕೊಟ್ಟಿದೆ. ರೈತರಿಗೆ ಒಂದು ಎಕರೆ ಬೆಳೆಗೆ 25 ರಿಂದ 30 ಸಾವಿರ ರೂಪಾಯಿಗಳು ಖರ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.ಬರ ಅಧ್ಯಯನ ತಂಡದ ಅಧ್ಯಕ್ಷ ಕೆಪಿ ಬಚ್ಚೇಗೌಡ ಮಾತನಾಡಿ,ಇಂತಹ ಬರಗಾಲವನ್ನು ಇಂದೆಂದೂ ಖಂಡಿಲ್ಲ.
ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ.ರೈತರು ಸಂಕಷ್ಟದಲ್ಲಿದ್ದಾರೆ ಸರ್ಕಾರ ಕೂಡಲೆ ರೈತರ ಸಂಕಷ್ಟಕ್ಕೆ ನಿಲ್ಲಬೇಕು. ಬರದಿಂದ ರೈತರು ಸಾಯುವಂತಹ ಸ್ಥಿಯಲ್ಲಿದ್ದರೂ ಸೌಜನ್ಯಕ್ಕಾದರೂ ಕೃಷಿ,ತೋಟಗಾರಿಕೆ,ರೆವಿನ್ಯೂ ಅಧಿಕಾರಿಗಳಾಗಲಿ ರೈತರ ತೋಟಗಳಿಗೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬುವಂತಹ ಕೆಲಸ ಮಾಡಿಲ್ಲ. ಬರ ಅಧ್ಯಯನ ತಂಡ ಬಂದ್ರು,ಹೋದ್ರು ಅಷ್ಟೇ, ಇದುವರೆಗೂ ಬಿಡಿಗಾಸು ಕೂಡ ಜಿಲ್ಲಾಧಿಕಾರಿಗಳ ಖಾತೆಗೆ ಬಂದಿಲ್ಲ. 9ಸಾವಿರ ಕೋಟಿ ಬಂದಿದೆ ಅಂದ್ರು, ಅದು ಖಾತೆಯಲ್ಲಿ ಇದ್ರೆ ಸಾಲದು, ಈ ಕೂಡಲೆ ಬರ ಪರಿಹಾರವನ್ನು ರೈತರಿಗೆ ತಲುಪಿಸುವಂತಹ ಕೆಲವಾಗಬೇಕು ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆಎಂ ಮುನೇಗೌಡ,ಗೌರಿಬಿದನೂರು ಸಿಆರ್ ನರಸಿಂಹಮೂರ್ತಿ,ಮುಕ್ತ ಮುನಿಯಪ್ಪ,ಬಂಕ್ ಮುನಿಯಪ್ಪ, ತಾದೂರು ರಘು,ಮೇಲೂರು ಉಮೇಶ್,ಪಾಪಣ್ಣ ಮತ್ತಿರರು ಇದ್ದರು.ಕಾಂಗ್ರೆಸ್ ಸರ್ಕಾರ ಬರ ಘೋಷಣೆ ಮಾಡಿ ತೆಲಂಗಾಣದಲ್ಲಿ ರಾಜಕೀಯ ಮಾಡಿಕೊಂಡು ಕುಳಿತುಕೊಂಡರೆ ಸಾಲದು,ರೈತರನ್ನು ಬೇಟಿ ಮಾಡಿ ಕಷ್ಟವನ್ನು ಅರಿಯಬೇಕು. 17 ಸಾವಿರ ಕೋಟಿ ಕಳಿಸಿಬಿಟ್ರಂತೆ,ಕೇಂದ್ರ ತಂಡ ಬಂದ್ ನೋಡ್ಕೊಂಡು ಹೋದ್ರಂತೆ,ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ 400ಕೋಟಿ ಬಿಡುಗಡೆ ಮಾಡಿದ್ದೇವೆ ಅಂತ ಹೇಳಿದ್ದಾರೆ, ಜಿಲ್ಲಾಧಿಕಾರಿಗಳ ಖಾತೆಗೆ ಬಂದಿದಿಯೋ ಇಲ್ವೋ ಗೊತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ನೀಡಿರುವ ವರದಿಯಂತೆ ಶೇಕಡ 25 ರಷ್ಟು ಅಂದರೆ 4,500 ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು, ರೈತರ ನೆರವಿಗೆ ಬರಬೇಕು. ಇಲ್ಲದಿದ್ದಲ್ಲಿ ಪ್ರತಿಯೊಂದು ತಾಲೂಕಿನಲ್ಲೂ ಉಗ್ರ ಹೋರಾಟ ಮಾಡಬೇಕಾಗುತ್ತದೆ.-ಜೆಕೆ ಕೃಷ್ಣಾರೆಡ್ಡಿ.ಮಾಜಿ ಶಾಸಕ ಚಿಂತಾಮಣಿ

Leave a Reply

Your email address will not be published. Required fields are marked *

error: Content is protected !!