ಉದಯವಾಹಿನಿ ಸಿರುಗುಪ್ಪ : ತಾಲೂಕಿನ ರಾರಾವಿ, ಅಗಸನೂರು, ಮಿಟ್ಟೆಸೂಗೂರು, ಬೊಮ್ಮಲಾಪುರ, ಕೊತ್ತಲಚಿಂತ ಭಾಗದಲ್ಲಿ ಬೇಟಿ ನೀಡಿದ ಜಿಲ್ಲಾ ಉಸ್ತುವಾರಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರು ರೈತರ ಜಮೀನುಗಳಲ್ಲಿ ಮಳೆಯಿಲ್ಲದೇ ಬೆಳೆಹಾನಿಂiÀi ಸಮೀಕ್ಷೆ ನಡೆಸಿದರು.
ಮಿಟ್ಟೆಸೂಗೂರು ಗ್ರಾಮದಲ್ಲಿ ಮಹಿಳೆಯರು ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವಂತೆ ಆಗ್ರಹಿಸಿದರು. ಬೊಮ್ಮಲಾಪುರ ಗ್ರಾಮದ ಕುಡಿಯುವ ನೀರಿನ ಕೆರೆ ಚಿಕ್ಕದಾಗಿದ್ದು, ಕೆರೆ ವಿಸ್ತರಿಸಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಬೇಕೆಂದು ಗ್ರಾಮಸ್ಥರಾದ ಚಂದ್ರಕಾAತರೆಡ್ಡಿ, ಜಯರಾಮರೆಡ್ಡಿ ಇನ್ನಿತರರಿಂದ ಮನವಿ ಸಲ್ಲಿಸಲಾಯಿತು.ಬೊಮ್ಮಲಾಪುರ ಗ್ರಾಮದಲ್ಲಿ ಮಣಿರಾಜು ಅವರ ಜಮೀನಿನಲ್ಲಿ ಹತ್ತಿಬೆಳೆ ಹಾನಿಯಾಗಿರುವ ಬಗ್ಗೆ ವೀಕ್ಷಣೆ ನಡೆಸಿದ ಸಚಿವರು ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ನಿರೀಕ್ಷಿತ ಮಳೆಯಾಗದ ಕಾರಣ ಬೆಳೆ ಹಾನಿಯಾಗಿದ್ದು ಯಾವುದೇ ಕಾರಣಕ್ಕೂ ಯಾರೂ ಆತಂಕಕ್ಕೊಳಗಾಗಬಾರದು. ಬರ ಪರಿಹಾರವನ್ನು ಒದಗಿಸುವುದರೊಂದಿಗೆ ಸರ್ಕಾರವು ರೈತರ ಬೆಂಬಲಕ್ಕೆ ನಿಲ್ಲುವುದಾಗಿ ಹಾಗೂ ಸಾರ್ವಜನಿಕರ ಎಲ್ಲಾ ಸಮಸ್ಯೆಗಳನ್ನು ಸಂಬAದಿಸಿದ ಇಲಾಖೆಗಳ ಅಧಿಕಾರಿಗಳ ಮೂಲಕ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರು ಬಿತ್ತನೆ ಹಾಗೂ ನಾಟಿ ಮಾಡಿದ ಯಾವುದೇ ಕಾರಣಕ್ಕೂ ಮೆಣಸಿನಕಾಯಿ, ಹತ್ತಿ, ಕಡಲೆ, ಜೋಳದಂತಹ ಬೆಳೆಗಳು ಒಣಗಿದರೆ, ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಭತ್ತವು ನೆಲಕ್ಕಚ್ಚಿ ಹಾಳಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಲಾಗುವುದೆಂದರು.
ಇದೇ ವೇಳೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಕೃಷಿ ಇಲಾಖೆಯ ಜೆ.ಡಿ.ಮಲ್ಲಿಕಾರ್ಜುನ, ತಹಶೀಲ್ದಾರ್ ಹೆಚ್.ವಿಶ್ವನಾಥ, ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು
