ಉದಯವಾಹಿನಿ , ಚಿಕ್ಕಬಳ್ಳಾಪುರ : ಎರಡು ದಶಮಾನಗಳ ಹಿಂದೆ ಮೈಸೂರು ರಾಜ್ಯವನ್ನು ಆಳಿದ್ದ ಟಿಪ್ಪು ಸುಲ್ತಾನ್ ದೇಶಕ್ಕಾಗಿ ತನ್ನ ಇಬ್ಬರು ಮಕ್ಕಳನ್ನೇ ಒತ್ತೆಯಿಟ್ಟ ಅಪಾರ ರಾಷ್ಟ್ರ ಪ್ರೇಮಿ ಎಂದು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಸಂಸ್ಥೆಯ ರಾಜ್ಯಾಧ್ಯಕ್ಷ ಡಾಕ್ಟರ್ ನಂದಿ ಎಂ ಬಾಷಾ ತಿಳಿಸಿದರು.
ಅವರು ನಗರದ ಶೆಟ್ಟಿಹಳ್ಳಿ ಬಡಾವಣೆಯ ಶಾಲೆಯಲ್ಲಿ ಟಿಪ್ಪು ಸುಲ್ತಾನ್ ಜನ್ಮದಿನದ ಪ್ರಯುಕ್ತ ಅವರ ಚಿತ್ರಪುಟಕ್ಕೆ ಪೂಜೆ ಸಲ್ಲಿಸಿ ಮಕ್ಕಳಿಗೆ ಪಠ್ಯ ವಿತರಿಸಿ ಸಿಹಿ ಹಂಚಿ ಮಾತನಾಡಿದರು.
ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸಿ ಆಚರಿಸಿದ್ದರು ಆದರೆ ಈಗ ಅವರು ಸರ್ಕಾರಿ ಕಾರ್ಯಕ್ರಮ ಆಚರಿಸುವ ಬಗ್ಗೆ ಏನು ಹೇಳಲಿಲ್ಲ ಇದು ನಮಗೆ ತುಂಬಾ ದುಃಖ ತಂದಿದೆ ಎಂದರು.
ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಧಾನ ಕಾರ್ಯದರ್ಶಿ ಕಾಶಿಮ್ ಬನ್ನೂರ್ ಸದಾಶಿರುಗಳಾದ ರಾಜಶೇಖರ್ ಸಮೀವುಲ್ಲಾ ಹೊಸೂರ್ ಒಳಗೊಂಡಂತೆ ಮತ್ತಿತರರು ಹಾಜರಿದ್ದರು
