ಉದಯವಾಹಿನಿ,ದೇವದುರ್ಗ: ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗಾಗಿ ಸರ್ಕಾರ ಆದೇಶ ಹೊರಡಿಸಿದ್ದಾದರೂ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತೆ ಕಾಣುತ್ತದೆ ಹೌದು ಇದು ಎಲ್ಲಿ ಅಂತೀರಾ ? ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೊರ ವಲಯದಲ್ಲಿ ಬರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುನಲ್ಲಿ ನಡೆದ ಘಟನೆ , ಶನಿವಾರ ದಂದು ಸರ್ಕಾರವು ಜಯಂತಿ ಆಚರಣೆ ಮಾಡುವಂತೆ ಆದೇಶ ಹೊರಡಿಸಿದೆ ಆದರೇ ಅದು ಬರಿ ಹಾಳೆಗೆ ಸಿಮಿತ ಮಾಡಲಾಗಿದ್ದು ಈ ಕಾಲೇಜಿನ ಪ್ರಾಂಶುಪಾಲ ಯಾವೊಂದು ಜಯಂತಿ ಆಚರಣೆ ಮಾಡದೇ ಇರುವುದರ ಜೊತೆಗೆ ಉದ್ದೇಶ ಪೂರ್ವಕವಾಗಿ ಜಯಂತಿಗೆ ಗೈರಾಗಿದ್ದರು ಆದರೆ ಶನಿವಾರ ದಂದು ಸಿಕ್ಕಿಕೊಂಡಿದ್ದು ಜಯಂತಿ ಆಚರಣೆ ಮಾಡದೆ ಬೇಕಾಬಿಟ್ಟಿ ಯಾಗಿ ಗಣ್ಯರ ಭಾವಚಿತ್ರಳಿಗೆ ಅಪಮಾನ ವೆಸಗಿದ್ದಾರೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು .ಓಬವ್ವನ ಜಯಂತಿ ಆಚರಣೆ ಮಾಡದ ಪಾಲಿಟೆಕ್ನಿಕ್ ಕಾಲೇಜು: ಗಣ್ಯರ ಭಾವಚಿತ್ರಳಿಗೆ ಅಗೌರವ ತೋರಿದ ಪ್ರಾಂಶುಪಾಲನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರ ಪಟ್ಟು ಹಿಡಿದ ಬಳಿಕ ತಪ್ಪೊಪ್ಪಿಕೊಂಡ ಪ್ರಾಂಶುಪಾಲ ಮುಂದಿನ ಜಯಂತಿಗಳಿಗೆ ಕಡ್ಡಾಯವಾಗಿ ಆಚರಿಸುತ್ತೆನೆ ಮತ್ತು ನಾನು ಜಯಂತಿಗೆ ಕಡ್ಡಾಯವಾಗಿ ಭಾಗವಹಿಸುತ್ತೆನೆ ಮತ್ತು ಜಯಂತಿಯನ್ನು ಚಾಚು ತಪ್ಪದೇ ಆಚರಿಸುವೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ದಲಿತ ಮುಖಂಡರ ಮುಂದೆ ತಪ್ಪೊಪ್ಪಿಕೊಂಡರು ,ಪ್ರಾಂಶುಪಾಲನ ಅಳಲು:– ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಇನ್ನೂ ಕೆಲವು ಕೊಠಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಕೆ ವಿನೋದ ನಾಯಕ, ಛಲವಾದಿ ಮಹಾಸಭಾದ ಮುಖಂಡರಾದ ರಂಗನಾಥ ಕೊಂಬಿನ್, ಮಾಹಾಲಿಂಗಪ್ಪ ಜಾಲಹಳ್ಳಿ, ಅಮರೇಶ ಗೋಪಾಲಪುರ.ಇದ್ದರು.
