
ಉದಯವಾಹಿನಿ,ಯಾದಗಿರಿ: ಲೆಮನ್ ಪರಶುರಾಮ್ ಕೆಂಭಾವಿ ಇವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಗುರುವಿನ ಗುರಿ ಸಾಕ್ಷ್ಯಚಿತ್ರವನ್ನು ಶ್ರೀ ಜೈಭಾರತಾಂಬೆ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಲಾಗಿದ್ದು ಇದೀಗ ಚಿತ್ರೀಕರಣ ಸಂಪೂರ್ಣಗೊಂಡಿದ್ದು. ಕೆಲವೇ ದಿನಗಳಲ್ಲಿ ವೀಕ್ಷಕರ ಮುಂದೆ ಬರಲಿರುವ “ಗುರುವಿನ ಗುರಿ” ಶಿಕ್ಷಣದ ಕುರಿತಾದ ಸಂದೇಶ ಸಾರುವ ಚಿತ್ರ ಇದಾಗಿರುತ್ತದೆ. ಮಕ್ಕಳು ಮತ್ತು ಕಲಾವಿದರು ಅದ್ಭುತ ನಟನೆ ಮಾಡಿದ್ದಾರೆ.ಮುಂದೆ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಗುರುವಿನ ಗುರಿ ಸಾಕ್ಷಚಿತ್ರವನ್ನು ಬಿಡುಗಡೆ ಮಾಡಲು ಎಲ್ಲಾ ತಯಾರಿಯಲ್ಲಿ ನಿರತವಾಗಿರುವ ಶ್ರೀ ಜೈಭಾರತಾಂಬೆ ಟ್ರಸ್ಟ್ ಇದೀಗ ಸಾಕ್ಷ್ಯ ಚಿತ್ರದ ಎಲ್ಲಾ ಕೆಲಸ ಮುಗಿಸಿಕೊಂಡಿದ್ದೆ ಎಂದು ನಟ, ನಿರ್ದೇಶಕ ಲೆಮನ್ ಪರಶುರಾಮ್ ಉದಯವಾಹಿನಿಗೆ ತಿಳಿಸಿದ್ದಾರೆ.ಈ ಚಿತ್ರದ ಮುಖ್ಯಭೂಮಿಕೆಯಲ್ಲಿರುವ ಕಲಾವಿದರು ಲೆಮನ್ ಪರಶುರಾಮ್, ಮಾಂತೇಶ್ ಮದಕರಿ, ವಾಣಿ ಗುಲ್ಬರ್ಗ, ಎಲ್ಲಪ್ಪ ಹುಲಿ ಕಲ್ ಫಾಲ್ಸ್‌ನಾಗ, ಇಲಿಯಾಸ್ ಪಟೇಲ್ ಕೆಂಭಾವಿ ಅಕ್ಕಮಹಾದೇವಿ ಕೆಂಭಾವಿ ಇನ್ನು ದೇವತ್ಕಲ್ ಹಿರಿಯ ಪ್ರೌಢಶಾಲೆಯ ಮಕ್ಕಳು ನಟನೆ ಮಾಡಿ ಸೈ ಎನಿಸಿ ಕೊಂಡಿದ್ದಾರೆ. ಇನ್ನು ಛಾಯಾಗ್ರಹಣದ ಕೈಚಳಕವನ್ನು ಶಶಿಹಾಸನ್ ಅದ್ಭುತವಾದ ಕೆಲಸ ಮಾಡಿದ್ದಾರೆ ಕ್ಯಾಮರಾಕ್ಕೆ ಸಹಾಯಕರಾಗಿ ಗಜ(ನಾಗೇಶ್) ಮತ್ತು ವಿನಯ್ ಕೆಲಸ ಮಾಡಿರುತ್ತಾರೆ ಮತ್ತು ಕ್ಯಾಮೆರಾ ಯೂನಿಟ್ ಸಹಾಯ ಚಿತ್ರೀಕರಣಕ್ಕೆ ಸಹಕಾರ ನೀಡಿದವರು ಪ್ರಾಥಮಿಕ ಪ್ರೌಢಶಾಲೆ ದೇವತ್ಕಲ್, ಈ ಸಾಕ್ಷ್ಯಚಿತ್ರಕ್ಕೆ ನಿರ್ಮಾ ಪಕರಾಗಿ ಎಸ್ ಆರ್ ಪಾಟೀಲ್ ಹಾಗೂ ಬಸವರಾಜ ಪೂಜಾರಿ ಸುರಪುರ.
