ಉದಯವಾಹಿನಿ ಶಿಡ್ಲಘಟ್ಟ: ಒನಕೆ ಓಬವ್ವ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಅವರ ಧೈರ್ಯ ಸಾಹಸ ಮಹಿಳಾ ಸಮಾಜಕ್ಕೆ ಸ್ಫೂರ್ತಿ ಎಂದು ಶಾಸಕ ಬಿ.ಎನ್ ರವಿಕುಮಾರ್ ತಿಳಿಸಿದರು.ನಗರದ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಒನಕೆ ಓಬವ್ವ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ವೀರರಾಣಿ ಒನಕೆ ಓಬವ್ವ, ಕೆಳದಿ ಚೆನ್ನಮ್ಮ ಇನ್ನೂ ಹಲವಾರು ಮಹಾ ನಾಯಕರು ನಮ್ಮ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿ ಹೋರಾಡಿದ್ದಾರೆ, ಅವರಲ್ಲಿ ಒಬ್ಬೊಬ್ಬರ ಜಯಂತಿಯನ್ನು ಒಂದೊಂದು ಸಮುದಾಯದವರು ಆಚರಿಸುತ್ತಾರೆ. ಅವರು ಯಾವ ಜಾತಿಯ ಜನಾಂಗಕ್ಕೂ ಸೀಮಿತವಾಗಿರಲಿಲ್ಲ. ನಮ್ಮ ಜನತೆ ಕೇವಲ ಅವರು ನಮ್ಮ ಜನಾಂಕ್ಕೆ ಸೇರಿದವರು ಅಂತ ಹೇಳಿ ಆಚರಣೆ ಮಾಡುವುದು, ಇವರು ನಮ್ಮ ಜನಾಂಗದವರು ಅಲ್ಲ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ನಡೆದುಕೊಳ್ಳುವುದು ಬೇಡ ಎಲ್ಲಾ ಹೋರಾಟಗಾರರ ಜಯಂತಿ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಎಲ್ಲರ ಒಮ್ಮತದಿಂದ ಆಚರಣೆ ಮಾಡಬೇಕು ಎಂದರು.ಚಿತ್ರದುರ್ಗದ ಸಾಮ್ರಾಜ್ಯದಲ್ಲಿ ಬಹಳ ಧೈರ್ಯಶಾಲಿಯಾಗಿದ್ದ ಮಹಿಳೆ ಒನಕೆ ಓಬವ್ವ ಏಕಾಂಗಿಯಾಗಿ ಹೋರಾಡಿ ಅಮರವಾದಳು. ಚಿತ್ರದುರ್ಗ ಇತಿಹಾಸದಲ್ಲಿ ಒನಕೆ ಓಬವ್ವ ದೀರ ಮಹಿಳೆ. ಇಂತಹ ವ್ಯಕ್ತಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಹೊಣೆ ಇಂತಹ ಹೋರಾಟಗಾರರ ಜಯಂತಿಯನ್ನು ಆಚರಿಸುವುದು ನಮಗೆ ಹೆಮ್ಮೆಯಾಗಿದೆ ಎಂದು ಮಳ್ಳೂರು ಗ್ರಾಮದ ಮಾಜಿ ಐ ಎ ಎಸ್ ಅಧಿಕಾರಿ ಡಾ.ಎಸ್ ಎಂ ರಾಜು ಹರ್ಷ ವ್ಯಕ್ತಪಡಿಸಿದರು.ಹತ್ತನೇತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹೆಚ್ ಡಿಡಿ ಮತ್ತು ಜೆಪಿ ನಾರಾಯಣ್ ಟ್ರಸ್ಟ್ ವತಿಯಿಂದ ಹಾಗೂ ವಕೀಲರಾದ ಜಗದೀಶ್ ರವರಿಂದ ಪ್ರೋತ್ಸಾಹದನ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿಎನ್ ಸ್ವಾಮಿ,ನಗರಸಭೆ ಪೌರಾಯುಕ್ತ ಮಂಜುನಾಥ್, ಬಿಇಒ ನರೇಂದ್ರಕುಮಾರ್, ಕೆ.ವಿ.ವೆಂಕಟೇಶ್,ಟಿಹೆಚ್ ಒ ಡಾ. ವೆಂಕಟೇಶ್ ಮೂರ್ತಿ,ಬಂಕ್ ಮುನಿಯಪ್ಪ,ತಾದೂರು ರಘು,ದೊಗರನಾಯಕನಹಳ್ಳಿ ವೆಂಕಟೇಶ್, ಜಿಲ್ಲಾ ಜಾಗೃತಿ ಸದಸ್ಯ ಮೇಲೂರು ಮಂಜುನಾಥ್, ಡಾ.ಆರ್ ಶ್ರೀರಾಮ್,ಚಲವಾದಿ ಸಮುದಾಯ ಅಭಿವೃದ್ಧಿ ಸಮಿತಿ ತ್ಯಾಗರಾಜು, ಜಗದೀಶ್ ವಕೀಲರು,ಶ್ರೀನಿವಾಸ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!