ಉದಯವಾಹಿನಿ,ಮುದ್ದೇಬಿಹಾಳ ; ಮುದ್ದೇಬಿಹಾಳ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿರ 2019 ಜುಲೈ ತಿಂಗಳ ಗೌರವ ಧನ ಬಿಡುಗಡೆ ಆಗಿರಲಿಲ್ಲ ಈ ಒಂದು ತಿಂಗಳ ಗೌರವಧನಕ್ಕಾಗಿ ಸತತವಾಗಿ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಹೋರಾಟದ ಪರಿಣಾಮವಾಗಿ ಇಂದು ಆ ಒಂದು ತಿಂಗಳ ಗೌರವಧನ ಅವರ ಖಾತೆಗೆ ಜಮೆಯಾಗಿದೆ ಇದು ಅಂಗನವಾಡಿ ಕಾರ್ಯಕರ್ತರಯರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ( ಎಐಯುಟಿಯುಸಿ) ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್ ಟಿ ಹೇಳಿದರು ಅವರು ಶನಿವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು 2019 ಜುಲೈ ತಿಂಗಳ ಗೌರವ ಧನ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಬಿಎಂಎಸ್ ತಂತ್ರಾಂಶ ಮೂಲಕ ಬಿಡುಗಡೆಗಾಗಿ ತಡೆಹಿಡಿಯಲಾಗಿತ್ತು ಕೋವಿಡ್ ಸಂದರ್ಭವಿತ್ತು ಆಗಿನಿಂದ ನಿರಂತರವಾಗಿ ಹೋರಾಟ ಮಾಡುತ್ತ ಸಂಬಂಧಿಸಿದ ಇಲಾಖೆ ಎಲ್ಲಾ ಅಧಿಕಾರಿಗಳಿಗೆ ಗೌರವ ಧನ ಬಿಡುಗಡೆಗೆ ಮನವಿಯನ್ನು ಮಾಡಲಾಗಿತ್ತು ಯಾವಾಗ ನಮ್ಮ ಮನವಿಗೆ ಸ್ಪಂದನೆ ದೂರಕದೆ ಇದ್ದಾಗ ನಾವು ಸಿಡಿಪಿಒ ಕಚೇರಿಯ ಮುಂದೆ ಮತ್ತು ತಹಶಿಲ್ದಾರ ಕಚೇರಿಯ ಮುಂದೆ ಹೋರಾಟ ಮಾಡಬೇಕಾಯಿತು ನಮ್ಮ ಹೋರಾಟಕ್ಕೆ ಸ್ಪಂದಿಸಿ ಅಧಿಕಾರಿಗಳು ಲಿಖಿತ ರೂಪದಲ್ಲಿ ಗೌರವಧನವನ್ನು ಬಿಡುಗಡೆ ಮಾಡುವುದಾಗಿ ಪತ್ರ ನೀಡಿದ್ದರು ಅದರಂತೆ ಈಗ ನಮ್ಮ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರಿಗೆ ಗೌರವಧನ ಖಾತಗೆ ಜಮೆಯಾಗಿದ್ದು ಇದಕ್ಕೆ ಸಂಬಂಧಿಸಿದ ಇಲಾಖೆಯ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಮತ್ತು ತಾಲೂಕಿನ ಶಾಸಕರಾದ ಸಿ.ಎಸ್ ನಾಡಗೌಡ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.ತಾಲೂಕಿನ 420 ಅಂಗನವಾಡಿ ಕಾರ್ಯಕರ್ತೆಯರಿಗೆ 8000 ರೂ ಹಾಗೂ ಸಹಾಯಕರಿಗೆ 4000 ರೂ ಅಂತೆ ಜುಲೈ 2019 ರ ಒಂದು ತಿಂಗಳ ವೇತನ ಜಮೆಯಾಗಿದೆ ಈ ಹೋರಾಟದ ಕುರಿತು ವಿಜಯೋತ್ಸವನ್ನು ಶೀಘ್ರವಾಗಿ ಆಚರಿಸುವುದಾಗಿ ಅಂಗನವಾಡಿ ನೌಕರರ ತಾಲೂಕು ಅಧ್ಯಕ್ಷೆ ಸಾವಿತ್ರಿ ನಾಗರತ್ತಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಗುರಬಾಯಿ ಮಲಗೌಡ್ರ,ಕಾರ್ಯದರ್ಶಿ ರೇಣುಕಾ ಹಡಪದ,ಸದಸ್ಯರಾದ ಶಶಿಕಲಾ ಮಾದರ,ಮಾದೇವಿ ನಾಗೋಡ,ಜಯಶ್ರೀ ಜಿರಲಭಾವಿ,ಶಾಂತಾ ಕಠಾರೆ, ಲಕ್ಷ್ಮೀ ಬಿರಾದಾರ,ಸುವರ್ಣ ಕಾಳೆ,ಬಸಮ್ಮ ಹಿರೇಮಠ,ಶಶಿಕಲಾ ಹಿರೇಮಠ, ಶೋಭಾ ಪಾಟೀಲ್,ಶೈಲಾ ರಾಠೋಡ,ಕಲಾವತಿ ಪಾದಗಟ್ಟಿ,ರೇಣುಕಾ ಕುಂಟೋಜಿ,ಕಲಾವತಿ ವಂದಾಲ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!