ಉದಯವಾಹಿನಿ, ಹನೂರು: ತಾಲೂಕಿನ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಸೆ.11ರಿಂದ ದೀಪಾವಳಿ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು, ಐದು ದಿನಗಳ ಕಾಲಾ ಜಾತ್ರಾ ಮಹೋತ್ಸವವು ಬಹಳ ಅದ್ದೂರಿಯಾಗ ಜರುಗಲಿದ್ದು ಜಾತ್ರಾ ಮಹೋತ್ಸವದ ಮಗಳು ಅಗತ್ಯ ಸಿದ್ಧತೆಗಳ ಬಗ್ಗೆ ಪ್ರಾಧಿಕಾರ ಕಾರ್ಯದರ್ಶಿ ಸರಸ್ವತಿ ಅವರು ಸಭೆ ನಡೆಸಿದರು.
ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಸೆ10ರಂದು ಮಲೆ ಮಾದೇಶ್ವರ ಸ್ವಾಮಿಗೆ ವಿಷೇಶ ಪೂಜಾ ಪುನಸ್ಕಾರಗಳು ನೆರವೇರಲಿದ್ದು, 11ರಂದು ಮಾದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ, 12ರಂದು ನರಕ ಚತುರ್ತಿ ಅಂಗವಾಗಿ ವಿಷೇಶ ಸೇವೆಗಳು ಉತ್ಸವಾದಿಗಳು, 13 ರಂದು ಅಮಾವಾಸ್ಯೆಯ ಪ್ರಯುಕ್ತ ಹಾಲರುವೆ ಉತ್ಸವ ಹಾಗೂ ಬೇಡಗಂಪಣ ಸಮುದಾಯದ ವಿಧಿ ವಿದಾನದಲ್ಲಿ ಉತ್ಸವಾದಿಗಳು ಬಿಳಿ ಆನೆ ಉತ್ಸವ ಹಾಗೂ ವಿಷೇಶ ಪೂಜಾ ಪುನಸ್ಕಾರಗಳು ಸೆ.14ರಂದು ಬೆಳಿಗ್ಗೆ 8.50 ರಿಂದ 9.50 ರೊಳಗೆ ಸಲ್ಲುವ ಶುಭ ಮಹೋರ್ತದಲ್ಲಿ ಸಲ್ಲುವ ಸುಭ ಲಗ್ನದಲ್ಲಿ ಮಾದೆಶ್ವರ ಸ್ವಾಮಿಯ ಮಹಾ ರಥೋತ್ಸವವು ಜರುಗುವ ಮೂಲಕ ಮಾದೇಶ್ವರ ಸ್ವಾಮಿಯ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ದೀಪಾವಳಿ ಜಾತ್ರೆಗೆ ಬರುವ ಭಕ್ತರಿಗೆ ವಿಷೇಶ ಸೌಕರ್ಯ : ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಬರುವ ಎಲ್ಲಾ ಭಕ್ತಾಧಿಗಳ ಅನುಕೂಲಕ್ಕಾಗಿ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ನಿರಂತರ ಅನ್ನ ದಾಸೊಹದ ವ್ಯವಸ್ಥೆ, ದೇವಾಲಯದ ಮುಂಬಾಗ , ಶಾಲಾ ಆವರಣದಲ್ಲಿ, ಸಾಲೂರು ಮಠದಲ್ಲಿ ಭಕ್ತಾಧಿಗಳು ತಂಗು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶ್ರೀಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಕಾಲ್ನಡಿಗಗೆಯಲ್ಲಿ ಬರುವಂತಹ ಭಕ್ತರಿಗೆ ತಾಳು ಬೆಟ್ಟದಿಂದ ಶ್ರೀ ಕ್ಷೇತ್ರದ ಕುಡಿಯುವ ನೀರಿನ ವ್ಯವಸ್ಥೆ ಭಕ್ತಾಧಿಗಳು ತಂಗಲು ವ್ಯವಸ್ಥೆ ಕ್ಲಪಿಸಲು ಯೋಜನೆ ರೂಪಿಸಲಾಗಿದೆ.
