
ಉದಯವಾಹಿನಿ, ಸಿಂಧನೂರು: 2019 ರಲ್ಲಿ ಸಿಂಧನೂರು ನಗರದ ಸತ್ಯ ಗಾರ್ಡನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಅ ದಿನ ಸ್ಪರ್ಧೆಯಲ್ಲಿ ಸುಮಾರು 12 ನೂರು ಜನ ಸ್ಪರ್ಧೆಗಳು ವಿವಿಧ ರಾಜ್ಯಗಳಿಂದ ಆಗಮಿಸಿದ್ದರು ಕಾರ್ಯಕ್ರಮ ಸಹ 100% ಯಶಸ್ವಿಯಾಗಿ ನಡೆದಿದ್ದರಿಂದ ಬೇರೆ ಬೇರೆ ರಾಜ್ಯಗಳ ಮತ್ತೋಮ್ಮೆ 2023ರ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯನ್ನು ನಿಮ್ಮ ಕರ್ನಾಟಕದ ನಿಮ್ಮ ಭಾಗದಲ್ಲಿ ಆಯೋಜನೆ ಮಾಡಿ ಎಂದು ಸಲಹೆ ಬಂದಿದ್ದರಿಂದ ನವೆಂಬರ್ 25/26 ರಂದು ರಾಯಚೂರು ಜಿಲ್ಲೆಯ ಸಿಂಧನೂರಿ
ನ. ಸತ್ಯ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ದೊಡ್ಡ ಮನೆ ಸೊಸೆಯಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರಾಟೆ ಕ್ಲಬ್ ರಾಜ್ಯ ಅಧ್ಯಕ್ಷರಾದ ಸಚಿನ್ ಕಲ್ಯಾಣ ಕುಮಾರ ಅವರು ಈ ಸ್ಪರ್ಧೆಯಲ್ಲಿ ನೇಪಾಳ ಬಾಂಗ್ಲಾದೇಶ ಶ್ರೀಲಂಕಾ ಭೂತಾನ್ ದೇಶಗಳಿಂದ ಮತ್ತು ಭಾರತ ಸೇರಿದಂತೆ ಸುಮಾರು 11/12 ಸ್ಟೇಟ್ ಗಳಿಂದ ಸುಮಾರು 15 ನೂರು ಜನ ಸ್ಪರ್ದಾಳುಗಳು ಭಾಗವಹಿಸುವವರು ಅಂಜಾದು ಗೆದ್ದಂತ ಸ್ಪರ್ಧೆಗಳಿಗೆ ದೊಡ್ಮನೆ ಟ್ರೋಫಿ ಕಪ್ ನೀಡಲಾಗುತ್ತದೆ. ಕೆಲವು ಸ್ಪರ್ಧೆಗಳಿಗೆ ಕ್ಲಬ್ ಕಡೆಯಿಂದ ಪ್ರಮಾಣ ಪತ್ರವನ್ನು ಕೊಡಲಾಗುತ್ತದೆ.ಎಂದು ಹೇಳಿದರು ,
ಈ ಕರಾಟೆ ಯಿಂದ ಆರೋಗ್ಯ ಮತ್ತು ಆತ್ಮರಕ್ಷಣೆಗಾಗಿ ಇಂತಹಾ ಇಂಥ ಕಲೆಯನ್ನು ವೃದ್ಧಿಸಿಕೊಳ್ಳುವುದಕ್ಕೆ ಒಳ್ಳೆಯ ಅವಕಾಶ. ಬಂದಂತ ಸ್ಪರ್ಧಿಗಳಿಗೆ ಎರಡು ದಿನ ಕೋಚ್ ಗಳಿಗೆ ಇತರ ತರಬೇತಿ ಹಾಗೂ ಊಟ ಮತ್ತು ಉಳಿದುಕೊಳ್ಳುವುದಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಎಂದರು ಈ ಸಂದರ್ಭದಲ್ಲಿ ಶೇಖರ್ ರಾಠೋಡ್. ಹುಲಿಗೇಶ. ಹನುಮೇಶ. ಅಪ್ಸಾ. ಪ್ರಜ್ಞಾ ರಮೇಶ್ ಎಮ್ ಎಸ್ ಖಾನ್ ಸೇರಿದಂತೆ ಇತರರು ಇದ್ದರು.
