ಉದಯವಾಹಿನಿ, ಬೆಂಗಳೂರು: ಅಪಘಾತ ಪ್ರಕರಣದಲ್ಲಿ ನಟ ನಾಗಭೂಷಣ್ ವಿರುದ್ಧ ನ್ಯಾಯಾಲಯಕ್ಕೆ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ೮೦ ಪುಟಗಳ ಆರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದಾರೆ.
ಅಪಘಾತ ಪ್ರಕರಣದ ಸಂಬಂಧಿಸಿದಂತೆ ೬೦ ಸಾಕ್ಷಿಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಇದರಿಂದ ನಾಗಭೂಷಣ್ ಅವರಿಗೆ ಸಂಕಷ್ಟ ಮತ್ತಷ್ಟು ಎದುರಾಗಿದೆ.
ಕಳೆದ ಅ. ೩೦ರಂದು ಕೋಣನ ಕುಂಟೆ ಸಮೀಪ ನಾಗಭೂಷಣ್ ಓಡಿಸುತ್ತಿದ್ದ ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಬಳಿಕ ವಿದ್ಯುತ್ ಕಂಬಕ್ಕೆ ಗುದ್ದಿತ್ತು. ಈ ವೇಳೆ ಪ್ರೇಮಾ ಎಂಬುವವರು ಮೃತಪಟ್ಟರೆ, ಅವರ ಪತಿ ಕೃಷ್ಣ ಅವರಿಗೆ ಗಂಭೀರ ಗಾಯವಾಗಿತ್ತು.
ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಚೇತರಿಕೆ ಕಂಡಿದ್ದು, ಅವರು ಹೇಳಿಕೆ ದಾಖಲು ಮಾಡಿದ್ದಾರೆ.
ಅಪಘಾತ ಪ್ರಕರಣದ ೮೦ ಪುಟಗಳ ಚಾರ್ಜ್ ಶೀಟ್ ನಲ್ಲಿ. ೬೦ ಸಾಕ್ಷಿಗಳಲ್ಲದೇ ಸಿಸಿಟಿವಿ ದೃಶ್ಯಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ಅಪಘಾತದ ವೇಳೆ ಪ್ರೇಮ ಅವರು ಮೃತಪಟ್ಟಿದ್ದಾರೆ. ಅವರ ಪತಿ ಕೃಷ್ಣ ಅವರು ಚೇತರಿಕೆ ಕಂಡಿದ್ದಾರೆ. ಈ ಹಿನ್ನೆಲೆ ಮುಖ್ಯವಾಗಿ ಕೃಷ್ಣಾ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ.
ಪ್ರೇಮಾ ಹಾಗೂ ಕೃಷ್ಣ ಅವರು ಪಾದಾಚಾರಿ ಮಾರ್ಗದಿಂದ ನೇರ ರಸ್ತೆಗೆ ಇಳಿದಿದ್ದರು ಎಂದು ಹೇಳಿಕೆ ನೀಡಿದ್ದರು. ಏಕಾಏಕಿ ಕಾರಿಗೆ ಅಡ್ಡಲಾಗಿ ಬಂದ ಕಾರಣ ಕಾರ್ ನಿಯಂತ್ರಣಕ್ಕೆ ಸಿಗದೆ ಅಪಘಾತವಾಗಿದೆ ಎಂದು ನಾಗಭೂಷಣ್ ಹೇಳಿಕೆ ನೀಡಿದ್ದರು. ಆದರೆ, ಕೃಷ್ಣ ಅವರ ಹೇಳಿಕೆಯಲ್ಲಿ ಎಲ್ಲವೂ ಉಲ್ಟಾ ಆಗಿದೆ.
