ಉದಯವಾಹಿನಿ, ಚಿಕ್ಕಮಗಳೂರು : ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿರುವ ಕಾರ್ಯಕ್ರಮಕ್ಕೆ ನಾನು ಹೋಗಲ್ಲ ಎಂದು ಬಿಜೆಪಿಯ ಮಾಜಿ ಸಚಿವ ಸಿಟಿ ರವಿ ತಿಳಿಸಿದ್ದಾರೆ.
15ನೇ ತಾರೀಖು ಜವಾಬ್ದಾರಿ ಸ್ವೀಕಾರ ಮಾಡ್ತಿದ್ದಾರೆ. 15 ರ ರಾತ್ರಿವರೆಗೂ ಮಧ್ಯ ಪ್ರದೇಶದಲ್ಲಿ ಚುನಾವಣಾ ಕ್ಯಾಂಪೇನ್ ಇದೆ. 15ಕ್ಕೆ ನಾನು ಇರಲ್ಲ ಅಂತ ಹೇಳಿದ್ದೇನೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ ಟಿ ರವಿ ಹೇಳಿದ್ದಾರೆ.ನಂತರ ಎಂ ಪಿ ರೇಣುಕಾಚಾರ್ಯ ಹೇಳಿಕೆಗೆ ಸಿ ಟಿ ರವಿ ಮೌನ ವಹಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಾನು ಇದ್ದೀನಾ? ರಾಜ್ಯಾದ್ಯಂತ ಪ್ರವಾಸ ಮಾಡುವೆ, ರೇಣುಕಾಚಾರ್ಯ ಹೇಳಿಕೆಗೆ ನಾನೇನು ಹೇಳಲಿ. ನಾನ್ ಏನ್ ಹೇಳೋಕೆ ಆಗುತ್ತೆ. ಅದು ಅವರ ಭಾವನೆ, ಅವರು ಹೇಳಿದ್ದಾರೆ. ರಾಜ್ಯ ಸುತ್ತಬಹುದು, ಸುತ್ತುವ ಸಾಮರ್ಥ್ಯ ಇದೆ. ಸುತ್ತಲಿ ಎಂದು ಹೇಳಿದರು.
