ಉದಯವಾಹಿನಿ, ಬೆಂಗಳೂರು: ದೀಪಾವಳಿ ಹಬ್ಬದಂದು ನಿಖಿಲ್ ಕುಮಾರಸ್ವಾಮಿ ನಾಡಿನ ಜನರಿಗೆ ಶುಭಕೋರಿದ್ದಾರೆ. ಪತ್ನಿ ರೇವತಿ ಹಾಗೂ ಮಗನ ಜೊತೆ ಹಬ್ಬ ಆಚರಿಸಿದ ನಿಖಿಲ್ ಕುಮಾರಸ್ವಾಮಿ, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ನಿಖಿಲ್ ಕುಮಾರಸ್ವಾಮಿ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುದೊಡ್ಡ ಪ್ರೊಡಕ್ಷನ್ ಹೌಸ್​, ಲೈಕಾ ನಿರ್ಮಾಣ ಸಂಸ್ಥೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮಣ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 5 ತಿಂಗಳಿನಲ್ಲಿ ನಿಖಿಲ್ ಸಿನಿಮಾ ಶೂಟಿಂಗ್​ ಮುಗಿಸುವ ಭರದಲ್ಲಿದ್ದಾರೆ.
ಜಾಗ್ವರ್​, ಸೀತಾ ರಾಮ ಕಲ್ಯಾಣ, ರೈಡರ್​ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಿದ ನಿಖಿಲ್ ಮತ್ತೊಂದು ಹೊಸ ಸಿನಿಮಾ ಮೂಲಕ ತೆರೆ ಮೇಲೆ ಬರಲಿದ್ದಾರೆ.
2020ರ ಏಪ್ರಿಲ್​ನಲ್ಲಿ ಬಿಡದಿಯ ತೋಟದ ಮನೆಯಲ್ಲಿ ಅದ್ಧೂರಿಯಾಗಿ ನಿಖಿಲ್-ರೇವತಿ ಮದುವೆ ನಡೆಯಿತು. 2021ರ ಸೆಪ್ಟೆಂಬರ್​ನಲ್ಲಿ ರೇವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ರೇವತಿ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!