ಉದಯವಾಹಿನಿ, ಬೆಂಗಳೂರು: ಕಳೆದ ಒಂದು ವಾರದಿಂದ ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗೆ ಪತರುಗುಟ್ಟಿದ್ದ ಕಾಂಗ್ರೆಸ್ ಜನರ ಗಮನ ಬೇರೆಡೆ ಸೆಳೆಯಲು ಕರೆಂಟ್ ಕಳ್ಳತನದ ಮೊರೆ ಹೋಗಿದೆ ಎಂದು ಜೆಡಿಎಸ್ ಟೀಕಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಕೊಳಕು ಮಂಡಳ ಕಾಂಗ್ರೆಸ್‌ಗೆ ತುರ್ತಾಗಿ ಜನರ ಗಮನ ಬೇರೆಡೆ ಸೆಳೆಯುವ ಅಗತ್ಯ ಇತ್ತು. ಹಾಗಾಗಿ ಕರೆಂಟ್‌ನ ಮೊರೆ ಹೋಗಿದೆ ಎಂದು ಟೀಕಿಸಿದೆ.
ಕಾಂಗ್ರೆಸ್‌ನ ಗ್ಯಾರಂಟಿಗಳ ವೈಫಲ್ಯಗಳು ದಿನ ಬೆಳಗಾದರೆ ಜನರಿಂದ ಉಗಿಸಿಕೊಳ್ಳುತ್ತಿರುವ ಕಾಂಗ್ರೆಸ್ ದಿಕ್ಕಿಲ್ಲದೆ ಅಪಾಯಕಾರಿ ಕರಂಟ್ ವೈರ್ ಹಿಡಿದು ಬಿಟ್ಟ ದರ್ವೇಸಿ ಕಾಂಗ್ರೆಸ್‌ಗೆ ಬೇರೆ ದಾರಿ ಕಾಣುತ್ತಿಲ್ಲ ಎಂದು ಜೆಡಿಎಸ್ ಕಿಡಿಕಾರಿದೆ.
