ಉದಯವಾಹಿನಿ, ಮಾಲೂರು: ಹಿಂದುಗಳ ಸಾಂಪ್ರದಾಯಿಕ ಹಬ್ಬವಾದ ಬೆಳಕಿನಹಬ್ಬಎಂದೇಕರೆಯುವ ದೀಪಾವಳಿ ಹಬ್ಬವನ್ನು ತಾಲ್ಲೂಕಿನಾದ್ಯಾಂತ ಭಾನುವಾರ ಹಾಗೂ ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಹಿಂದೂ ಧರ್ಮದವರ ಪಾಲಿಗೆ ಏಕಾದಶಿ ಹಬ್ಬದ ಸರಣಿಯೊಂದಿಗೆ ಪ್ರಾರಂಭವಾಗುವ ಹಬ್ಬಗಳ ಪೈಕಿ ಕೊನೆಯ ಹಬ್ಬ ದೀಪಾವಳಿ ಹಬ್ಬ ಹೌದು.ಹೀಗಾಗಿ ಈ ಹಬ್ಬಕ್ಕೆ ವಿಶೇಷ ಮಹತ್ವ ಪ್ರಾಪ್ತವಾಗಿದೆ ದೀಪಾವಳಿ ಹಬ್ಬವನ್ನು ಸಂಪ್ರದಾಯದಂತೆ ಆಚರಿಸುವತಾಲ್ಲೂಕಿನ ಮಂದಿಗೆ ನರಕ ಚತುರ್ದಶಿಮತ್ತು ಬಲಿ ಪಾಡ್ಯಮಿ ನಡುವಿನ ದಿನಅತ್ಯಂತ ಶ್ರೇಷ್ಠವಾದುದು.ದೀಪಾವಳಿಯ ಹಬ್ಬದಮೊದಲನರಕದಿನವಾದಚತುರ್ದಶಿಯಶನಿವಾರ ಮಹಿಳೆಯರು ಕಜ್ಜಾಯ ತಯಾರಿಸಲು ಅಕ್ಕಿಯ ಪಾತ್ರೆಗೆ ನೀರುತುಂಬುವ ಹಬ್ಬವನ್ನು ಪ್ರಾರಂಭಿಸಿ , ಹಬ್ಬಕ್ಕೆ ಸಿದ್ಧತೆ ನಡೆಸಿದ್ದರು.ಮಾರನೇ ದಿನವಾದ ಅಮಾವಾಸ್ಯೆಯ ಭಾನುವಾರ ಸೋಮವಾರ ಎರಡು ದಿನ ಅಮಾವಾಸ್ಯೆಯಾದ್ದರಿಂದ ಬೆಲ್ಲದ ಪಾಕ ಎತ್ತಿ,ಕಜ್ಜಾಯ ತಯಾರಿಸಿದರು. ಮನೆತನದಸಂಪ್ರದಾಯಕ್ಕೆ ತಕ್ಕಂತೆ ಹೊಸಪಾತ್ರೆಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಕಜ್ಜಾಯಗಳನ್ನು ಒಟ್ಟಿಗೂಡಿಸಿ ಹೊಸ ಹೊಸ ಬಟ್ಟೆಗಳನ್ನು ಧರಿಸಿ ಬಣ್ಣಬಣ್ಣದ ನೋಮುದಾರಗಳ ಸಮೇತ ಬೀದರಿನ ಮೊರದಲ್ಲಿಟ್ಟಿಕೊಂಡುತೆರಳಿದೇವಾಲಯಗಳಗೆಪೂಜೆನೋಮುಬಹುತೇಗೌರಿಯ ಕಳಶಕ್ಕೆ ಪೂಜೆ ಸಲ್ಲಿಸಿದರು.ಪಟ್ಟಣದಲ್ಲಿ ಗೌರಿ ಪೂಜೆಗಾಗಿಯೇ ಶಂಕರ ನಾರಾಯಣಸ್ವಾಮಿ ಸುಬ್ರಮಣ್ಯ ಸ್ವಾಮಿ ವೇಣುಗೋಪಾಲಸ್ವಾಮಿದೇವಾಲಯಗಳಲ್ಲಿ ಗೌರಿಯ ಸಮೇತ ಕಳಶವನ್ನು ಪ್ರತಿಷ್ಠಾಪಿಸಲಾಗಿತ್ತು. ಕಳಶದ ಮುಂದೆಕುಳಿತು ಪುರೋಹಿತರು ಕೇದಾರೇಶ್ವರ ವ್ರತ ಹಾಗೂ ಗೌರಿಯ ಕತ್ತೆಯ ಮಹತ್ವವನ್ನು ಭಕ್ತರಿಗೆ ಓದಿಹೇಳಿದರು.

Leave a Reply

Your email address will not be published. Required fields are marked *

error: Content is protected !!