ಉದಯವಾಹಿನಿ, ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ 5ನೇ ವಾರ್ಡಿನ ಷಾಹುಸೇನ್ ನಗರದಲ್ಲಿ ಶಾಸಕ ಬಿ.ಎಂ. ನಾಗರಾಜ್ ಪಟ್ಟಣದ ವಿವಿಧ ವಾರ್ಡಗಳಲ್ಲಿ 14ನೇ ಹಣಕಾಸಿನ ಅಡಿಯಲ್ಲಿ 1ಕೋಟಿ ರೂಪಾಯಿ ವೆಚ್ಚದ ವಿವಿಧ ವಾರ್ಡಿನಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಮಾಡಿದರು. ಟಿ.ಎಂ ಸಿದ್ದರಾಮಯ್ಯ ಸ್ವಾಮಿ, ಎಂ .ಬಂದೇನವಾಜ್, ನರೇಂದ್ರ ಸಿಂಹ, ಎನ.ಮಾಬುಸಾಬ್, ಕಾದರ್ ಭಾಷ, ನಾಗಪ್ಪ, ಮಲ್ಲಿಕಾರ್ಜನ ಹಾಗೂ ಕಾಂಗ್ರೇಸ್ ಮುಖಂಡರು ಇದ್ದರು.
