ಉದಯವಾಹಿನಿ, ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಆರಕ್ಷಕ ನೀರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುವ ನಾರಾಯಣಸ್ವಾಮಿ ರವರಿಗೆ ರೈತ ಸಂಘದಿಂದ ಗಿಡ ನೀಡುವ ಮುಖಾಂತರ ಸ್ವಾಗತ ಕೋರಿ ಹಾದಿ ತಪ್ಪುತ್ತಿರುವ ಯುವ ವಿದ್ಯಾರ್ಥಿಗಳಿಗೆ ಕರಪತ್ರದ ಮುಖಾಂತರ ಮಾದಕ ವಸ್ತುಗಳ ಅವಾಂತರದ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಲಾಯಿತು.
ಗಡಿಭಾಗದ ರೈತ ಕೂಲಿಕಾರ್ಮಿಕರು ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸಿರುತ್ತಾರೆ ಒಂದು ಕಡೆ ಕಾಡಾನೆಗಳ ಹಾವಳಿಯಿಂದ ರೈತರ ಜೀವ ಹಾಗೂ ಬೆಳೆ ಹಾನಿ ನಿರಂತರವಾಗಿ ನಡೆಯುವ ಜೊತೆಗೆ ಅತಿಹೆಚ್ಚು ಕಾಡು ಹೊಂದಿರುವ ಗಡಿಭಾಗಗಳಲ್ಲಿ ಮರಗಿಡಗಳ ಕಳವು ಅರಣ್ಯ ಭೂಮಿ ಒತ್ತುವರಿ ಜೊತೆಗೆ ಹದಗೆಟ್ಟಿರುವ ರಸ್ತೆಗಳು ಕೋಮಾ ಸ್ಥಿತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಒಟ್ಟಾರೆಯಾಗಿ ಸಮಸ್ಯೆಗಳ ಸರಮಾಲೆಯೇ ಹೊಂದಿರುವ ಗಡಿಭಾಗದ ರೈತ ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಮಾನ್ಯ ಪೋಲಿಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅರಕ್ಷಕ ನೀರೀಕ್ಷಕರನ್ನು ಒತ್ತಾಯಿಸಿದರು.
ಯರ್‌ಗೋಳ್ ಡ್ಯಾಂ ಉದ್ಘಾಟನೆ ಆಗಿರುವುದರಿಂದ ಸ್ಥಳಿಯರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಯುವಪ್ರೇಮಿಗಳು, ವಿದ್ಯಾರ್ಥಿಗಳು, ಪ್ರವಾಸಿಗರು ಹೆಚ್ಚಾಗಿ ಡ್ಯಾಂ ಬಳಿ ಬರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡದೆ ಸಿ.ಸಿ ಕ್ಯಾಮೆರಾ ಹಾಗೂ ಪೋಲಿಸ್ ಹೊರ ಠಾಣೆಯನ್ನು ತೆರೆಯಬೇಕೆಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!