ಉದಯವಾಹಿನಿ, ಕೋಲಾರ: ಕೋಲಾರ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆಯಾದ ಯರಗೋಳ್ ಡ್ಯಾಂನ ಉದ್ಘಾಟನಾ ಸಮಾರಂಭದಲ್ಲಿ ಯರಗೋಳ್ ಡ್ಯಾಂ ರುವಾರಿ ಎಂದು ಕೋಲಾರ ಜಿಲ್ಲಾಡಳಿತ ಕೆ.ಚಂದ್ರಯ್ಯ ಆದ ನನ್ನನ್ನು ಗುರುತಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗೌರವಿಸಿ ಸನ್ಮಾನಿಸಿರುವುದಕ್ಕೆ ಶಿಕ್ಷಕ ಕೆ.ಚಂದ್ರಯ್ಯ ಹಾಗೂ ಕುಟುಂಬ ಸಂತಸ ವ್ಯಕ್ತಪಡಿಸಿದೆ.
ನನ್ನ ಸೇವೆಯನ್ನು ಜಿಲ್ಲಾಡಳಿತ ಗುರುತಿಸಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಭಾರತೀಯ ದಲಿತ ಸೇನೆ ರಾಜ್ಯಾಧ್ಯಕ್ಷ ದಲಿತ್ ನಾರಾಯಣಸ್ವಾಮಿ ಮತ್ತು ತಂಡ, ಕರ್ನಾಟಕ ದಲಿತ ಸಿಂಹಸೇನೆ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್ ಹಾಗೂ ತಂಡ, ದಲಿತ ಹಕ್ಕುಗಳ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಎಂ.ಆರ್.ಚೇತನ್‌ಬಾಬು ಹಾಗೂ ತಂಡ, ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಸಾಹುಕಾರ್ ಶಂಕರಪ್ಪ, ಕರ್ನಾಟಕ ದಲಿತ ರೈತ ಸೇನೆ ಸಂಸ್ಥಾಪಕ ಹುಣಸನಹಳ್ಳಿ ಎನ್.ವೆಂಕಟೇಶ್, ಮುಖಂಡರಾದ ಅಂಬೇಡ್ಕರ್ ನಗರ ಸೋಮಶೇಖರ್, ಕಾರಬೆಲೆ ವೆಂಕಟೇಶ್, ಖಾದ್ರಿಪುರ ನಾರಾಯಣ್, ಮತ್ತಿಕುಂಟೆ ಕೃಷ್ಣ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
