
ಉದಯವಾಹಿನಿ, ಔರಾದ್ : ಸಾರ್ವಜನಿಕರು ಸರ್ಕಾರ ಒದಗಿಸುವ ಆರೋಗ್ಯ ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಕಾಲ ಕಾಲಕ್ಕೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮುಂಬರುವ ರೋಗಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಧನ್ನುರಾ ಹೆಚ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಚಿನ ಶ್ರೀಗೆರಿ ಕರೆ ನೀಡಿದರು. ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಬೀದರ ಪ್ರಾಥಮಿಕ ಆರೋಗ್ಯ ಕೇಂದ್ರ ಧನ್ನೂರಾ ಎಚ್, ಹಾಗೂ ಲಾಲ ಬಹಾದ್ದೂರ ಶಿಕ್ಷಣ ಸಂಸ್ಥೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಒಂದನೇ ಹಂತದ ಸಮುದಾಯ ಆಧಾರಿತ ತಪಾಸಣೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯ ನಮ್ಮ ಸೌಭಾಗ್ಯವಾಗಿದೆ ದಿನನಿತ್ಯದ ಚಟುವಟಿಕೆ ನಡೆಸಲು ಉತ್ತಮ ಆರೋಗ್ಯ ಬಹಳ ಮುಖ್ಯ ಅದನ್ನು ಹಾಳಾಗದಂತೆ ನೋಡಿಕೊಂಡು ತಪಾಸಣೆ ನಡೆಸಿ ವೈದ್ಯರ ಸಲಹೆ ಪಡೆಯಬೇಕು ಎಂದುಫವ ಹೇಳಿದರು. ಧನ್ನೂರಾ ಪೋಲಿಸ್ ಠಾಣೆಯ ಪಿಎಸ್ಐ ವೀರಶೆಟ್ಟಿ ಮಾತನಾಡಿ, ಸರಕಾರ ಆರೋಗ್ಯ ಸೇವೆಗಳನ್ನು ತಮ್ಮ ಮನೆಯ ಬಾಗಿಲಿಗೆ ತರುತ್ತಿದೆ, ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸೇವೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.160 ಜನರಿಗೆ ಬಿಪಿ ಶುಗರ್ ಹಾಗೂ HIV ಪರೀಕ್ಷೆ ಮಾಡಲಾಯಿತು.ಈ ಸಂದರ್ಭದಲ್ಲಿ ಲಾಲ ಬಹದ್ದೂರ ಶಿಕ್ಷಣ ಸಂಸ್ಥೆಯ ವಿಶ್ವನಾಥ ಸ್ವಾಮಿ, ಧನ್ನೂರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್ಒ ಶಕೀಲಾ, ಪಿಎಚ್ಸಿಒ ಜಗದೇವಿ, ಪಿಪಿಟಿಸಿಟಿ ಕೇಂದ್ರದ ಆಪ್ತ ಸಮಾಲೋಚಕಿ ಸುನೀತಾ, ಪ್ರಯೋಗ ಶಾಲಾ ತಂತ್ರಜ್ಞೆ ಅನಿತಾ, ಬ್ರಿಮ್ಸ್ ಗುಪ್ತ ರೋಗಗಳ ಆಪ್ತ ಸಮಾಲೋಚಕಿ ಲಕ್ಷ್ಮಿ, ಲಾಲ ಬಹದ್ದೂರ ಶಿಕ್ಷಣ ಸಂಸ್ಥೆ ಸಿಬ್ಬಂದಿಗಳಾದ ಆನಂದ ಪೌಲ, ಅಶೋಕ ಪಾಂಚಾಳ, ಮಹಾದೇವಿ ವಾರಿಕ್, ಭಾಗ್ಯೇಜ್ಯೋತಿ, ಮಮತಾ ಸೇರಿದಂತೆ ಇತರರು ಇದ್ದರು.
