
ಉದಯವಾಹಿನಿ,ಚಿಂಚೋಳಿ: ರಾಜ್ಯ ಸರ್ಕಾರವು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಗೆ ಮರುಜೀವ ಕೊಡುವ ಕೆಲಸ ಮಾಡಬಾರದು ಎಂದು ಗೋರ ಸೇನಾ ತಾಲ್ಲೂಕಾಧ್ಯಕ್ಷ ಸಿಕೆಂದರ ರಾಠೋಡ್ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ಕಾಂತರಾಜು ಆಯೋಗದ ವರದಿ ಬಿಡುಗಡೆ ಮಾಡಬೇಕು.ನ್ಯಾ.ಸದಾಶಿವ ಆಯೋಗದ ವರದಿ ಪರಿಶೀಲಿಸುತ್ತೇವೆ ಎಂದು ಹೇಳಿದ ರಾಜ್ಯ ಸರ್ಕಾರದ ಆಹಾರ ಮಂತ್ರಿಗಳಾದ ಮುನಿಯಪ್ಪ ರವರನ್ನು ಸಂಪುಟ ಸಚಿವದಿಂದ ವಜಾಗೊಳಿಸಬೇಕು,ಹಿಂದಿನ ಬಿಜೆಪಿ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿರುವ ಒಳಮೀಸಲಾತಿ ಪ್ರಕರಣಕ್ಕೆ ಕೇ ಹಾಕಿ ಕೈ ಸುಟ್ಟು ಅಧಿಕಾರ ಕಳೆದುಕೊಂಡು ವಿಲವಿಲನೇ ಒದ್ದಾಡುತ್ತಿದೆ,ಹಾಗೆ ಈಗಿನ ಸರ್ಕಾರ ಮೀಸಲಾತಿಗೆ ಕೈ ಹಾಕಿದರೆ ಮುಂಬರುವ ಲೋಕಸಭಾ,ಜಿಲ್ಲಾ ಪಂಚಾಯತ್ ತಾಲ್ಲೂಕಾ ಪಂಚಾಯತ್ ಚುನಾವಣೆಯಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಜಾತಿ ಸಮೀಕ್ಷೆ ಜಾತಿಗಣತಿಗೆ ಇರುವ ಮೂಲಭೂತ ವ್ಯತ್ಯಾಸ ಸಂವಿಧಾನ ವಿಚ್ಚೇದನ 46ರಂತೆ ಸರ್ಕಾರಗಳು ಜಾತಿಗಳ ಆರ್ಥಿಕ ಶೈಕ್ಷಣಿಕ ಸಮಾಜಿಕ ಸಮೀಕ್ಷೆ ಕೈಗೊಂಡು ಅಭಿವೃದ್ಧಿ ಆಗಿರುವ ತಾರತಮ್ಯ ಸೂಕ್ತ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು,ಜಾತಿಗಣತಿ ಪ್ರತಿ ಹತ್ತು ವರ್ಷಕೊಮ್ಮೆ ಸಂವಿಧಾನ ವಿಚ್ಚೇದನ 246ಶೆಡ್ಯೂಲ್ ನಂತೆ ಒಕ್ಕೂಟ ಸರ್ಕಾರ ಲೀಸ್ಟ್ ಒಂದರಡಿ 69ರ ಪ್ರಕಾರ ಜಾತಿಯಲ್ಲಿ ಬರುವ ಕುಟುಂಬಗಳ ಗಣತಿ ಮಾಡಿ 1935 ಮಾಡಿಸಿದ್ದಾರೆ ವರದಿ ಬಿಡುಗಡೆ ಆಗಿದ್ದು ಸ್ವಾತಂತ್ರ್ಯ ಭಾರತದ ಯುಪಿಎ ಸರ್ಕಾರದಡಿ ಜಾತಿ ಗಣತಿ ನಡೆದು ವರದಿ ಬಿಡುಗಡೆ ಮಾಡಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ:– ಉಪಾಧ್ಯಕ್ಷ ಲಿಂಬಾಜಿ ರಾಠೋಡ್,ಪ್ರಧಾನ ಕಾರ್ಯದರ್ಶಿ ಜಗನ್ನಾಥ ರಾಠೋಡ್,ನಗರ ಅಧ್ಯಕ್ಷ ಕಿಶನ ರಾಠೋಡ್,ಶಂಕರ ಪವ್ಹಾರ,ಮಂಜುನಾಥ ರಾಠೋಡ್,ಗೋವಿಂದ ಚವ್ಹಾಣ,ಅನೇಕರಿದ್ದರು.
