ಉದಯವಾಹಿನಿ, ಆನೇಕಲ್ : ಹೆನ್ನಾಗರ ಗ್ರಾಮದಲ್ಲಿ ನೃಪತುಂಗ ಜಾನಪದ ನೃತ್ಯ ಕಲಾ ಸಂಘದ ವತಿಯಿಂದ ಸಡಗರ ಸಂಭ್ರಮದಿಂದ ೬೮ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇನ್ನು ೬೮ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ಬೆಳ್ಳಿರಥ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಇನ್ನು ಇದೇ ಸಂಧರ್ಭದಲ್ಲಿ ಗಣ್ಯರು ಹಾಗೂ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ದ್ವಜಾ ರೋಹಣ ನೆರವೇರಿಸಿದರು. ವಿಶೇಷವಾಗಿ ಗ್ರಾಮದ ಹಿರಿಯರನ್ನು ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನಕುಮಾರ್, ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಉಪಾದ್ಯಕ್ಷೆ ಲಷ್ಮೀ ನಾಗೇಶ್, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಆರ್.ಕೆ. ಕೇಶವರೆಡ್ಡಿ, ಮುಖಂಡರಾದ ಚಿಕ್ಕಮುನಿಸ್ವಾಮಿ. ಮುನಿಯಪ್ಪ, ಬಸವರಾಜ್, ಕೃಷ್ಣಪ್ಪ, ಪ್ರಭು, ನಂಜುಂಡಪ್ಪ, ಮುರಳಿ. ಮಂಜುನಾಥ್, ಷಡಾಕ್ಷರಿ. ಮಹೇಶ್, ಶ್ರೀನಿವಾಸ್, ಆರ್.ಸತೀಶ್, ಹೆಚ್.ಎಂ. ರಮೇಶ್, ಕೃಷ್ಣಮೂರ್ತಿ, ಜ್ಯೋತೇಶ್, ರುದ್ರೇಶ್, ರಾಜ್ಯ ಪ್ರಶಸ್ಥಿ ವಿಜೇತರಾದ ಎಸ್.ಪಾಪಣ್ಣ, ರಾಮಕೃಷ್ಣಪ್ಪ, ನಾಗರಾಜ್, ಸದಸ್ಯರಾದ ಶ್ರೀನಿವಾಸ್, ಎನ್.ಸತೀಶ್, ಪುಷ್ಪ ರಾಜಶೇಖರ್, ಅನಿತಾ ವೆಂಕಟಸ್ವಾಮಿ, ಎಂ.ಕುಮಾರ್, ಶಿವರಾಜ್, ನಾಗರಾಜ್, ಕಿರಣ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!