ಉದಯವಾಹಿನಿ, ಬೆಂಗಳೂರು: ಇದೇ ತಿಂಗಳ 25ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಕರಾವಳಿಯ ಹೆಮ್ಮೆ ಕಂಬಳ ಉತ್ಸವಕ್ಕೆ ವಿವಾದಿತ ವ್ಯಕ್ತಿ ಬ್ರಿಜ್ ಭೂಷಣ್ ಅವರನ್ನು ಕಾರ್ಯಕ್ರಮದಿಂದ ಆಯೋಜಕರು ಕೈಬಿಟ್ಟಿದ್ದಾರೆ.ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸಿಲುಕಿರುವ ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್ ಅವರನ್ನು ಕಂಬಳ ಉತ್ಸವಕ್ಕೆ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣ ಮತ್ತಿತರ ಕಡೆ ಬ್ರಿಡ್ಜ್ ಭೂಷಣ್ ಅವರನ್ನು ಯಾವುದೇ ಕಾರಣಕ್ಕೂ ಕಂಬಳ ಉತ್ಸವಕ್ಕೆ ಆಹ್ವಾನಿಸಬಾರದೆಂದು ಅನೇಕರು ಮನವಿ ಮಾಡಿದ್ದರು.ಇದಕ್ಕೆ ಅಂತಿಮ ತೆರೆ ಎಳೆದ ಕಂಬಳ ಸಮಿತಿ ಅಧ್ಯಕ್ಷರೂ ಆಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ರೈ, ಕಂಬಳ ಒಂದು ಜನಪ್ರಿಯ ಕ್ರೀಡೆ. ಇದೊಂದು ದೊಡ್ಡ ಕಾರ್ಯಕ್ರಮ. ಹೀಗಾಗಿ ಬೇರೆಯವರು ಬಂದು ಮನವಿ ಮಾಡಿದ್ದರಿಂದ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು ಎಂದು ಸಮರ್ಥಿಸಿಕೊಂಡರು.

Leave a Reply

Your email address will not be published. Required fields are marked *

error: Content is protected !!