ಉದಯವಾಹಿನಿ , ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯಎಂದು ಶಾಸಕ ವಿಶ್ವಾಸ್ ವೈದ್ಯ ಹೊಸ ಬಾಂಬ್ ಸಿಡಿಸಿದ್ದು ,ಇದು ಹೊಸ ಸಂಚಲನ ಸೃಷ್ಠಿಸಿದೆ.ಯರಗಟ್ಟಿಯಲ್ಲಿ ಮಾತನಾಡಿದ ಅವರು ಸತೀಶ್ ಜಾರಕಿಹೊಳಿ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ ಮುಂದೆ ಸಿಎಂ ಆಗುತ್ತಾರೆ ಅವರನ್ನು ಆ ಸ್ಥಾನದಲ್ಲಿ ನೋಡಬೇಕಾಗಿದೆ ಎಂದು ಹೇಳಿದ್ದಾರೆ.ಪಶ್ಚಿಮ ವಿಭಾಗ ಪೊಲೀಸರ ಕರ‍್ಯಾಚರಣೆ: ೧.೧೫ ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಜಪ್ತಿಪರ‍್ವ ದಿಕ್ಕಿನಲ್ಲಿ ಸರ‍್ಯ ಹುಟ್ಟುವುದು ಎಷ್ಟೋ ಸತ್ಯವೋ ಸತೀಶ್ ಜಾರಕಿಹೊಳಿ ಅಣ್ಣ ಸಿಎಂ ಆಗುವುದು ಕೂಡ ಅಷ್ಟೇ ಸತ್ಯಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಈ ಭಾಗದಲ್ಲಿ ಭಾರಿ ಸದ್ದು ಮಾಡಿದೆ.ಈ ಮೊದಲೇ ಸತೀಶ್ ಜಾರಕಿಹೊಳಿ ತಮ್ಮ ಅಸಮಾಧಾನಗೊಂಡು ತಮ್ಮ ರಾಜಕೀಯ ದಾಳ ಉರುಳಿಸಿದ್ದರು.ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿತ್ತು ಆದರೆ ಈಗ ಬೆಂಬಲಿಗ ಶಾಸಕರು ನೀಡುತ್ತಿರುವ ಹೇಳಿಕೆ ಹೊಸ ಗೊಂದಲ ಸೃಷ್ಠಿಸುತ್ತಿದೆ.
