ಉದಯವಾಹಿನಿ, ಬೆಂಗಳೂರು : ಏಕ ಕಾಲಕ್ಕೆ ಅತಿ ಹೆಚ್ಚು ಮಂದಿ ಕೈತೊಳೆಯುವ ಅಭಿಯಾನದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಗ್ಲೆನಿಗಲ್ಸ್ ಆಸ್ಪತ್ರೆಯಿಂದ ಗಿನ್ನಿಸ್ ದಾಖಲೆ ನರ‍್ಮಿಸಲಾಗಿದೆ.
ಕನಕಪುರ ರಸ್ತೆಯ ವೈಕುಂಠ ಸಭಾಂಗಣದಲ್ಲಿ ನಡೆದ ಕರ‍್ಯಕ್ರಮದಲ್ಲಿ ಈ ಸಾಧನೆ ಮಾಡಲಾಗಿದ್ದು, ಭವಿಷ್ಯದ ಆರೋಗ್ಯ ರಕ್ಷಣೆ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಐದು ತಿಂಗಳ ಕಾಲ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ೮೦ ಸಾವಿರಕ್ಕೂ ಅಧಿಕ ವಿದ್ಯರ‍್ಥಿಗಳು, ೫೫ ಶಾಲೆಗಳು, ೧೦೦ಕ್ಕೂ ಹೆಚ್ಚು ಸ್ವಯಂ ಸೇವಕರು, ೧.೨೫ ಲಕ್ಷ ಪಾಲಕರಲ್ಲಿ ಆರು ಹಂತದ ಕೈ ತೊಳೆಯುವ ಬಗ್ಗೆ ರೋಟರಿ ಜ್ಞಾನಾಕ್ಷಿ ಕ್ಲಬ್, ರೋಟರಿ ಡಿಸ್ಟ್ರಿಕ್ಟ್-೩೧೯೧ ಸಹಭಾಗಿತ್ವದಲ್ಲಿ ಅಭಿಯಾನ ನಡೆಯಿತು.
ಐಎಚ್‌ಎಚ್ ಹೆಲ್ತ್ ಕೇರ್ ನ ಸಿಇಒ ಡಾ. ಪ್ರೇಮ್ ಕುಮಾರ್ ನಾಯರ್ ಮಾತನಾಡಿ, “ಇದು ದೊಡ್ಡ ಮಟ್ಟದ ದಾಖಲೆ ನರ‍್ಮಾಣಕ್ಕಿಂತಲೂ ಮಹತ್ವದ ಸಂಗತಿಯಾಗಿದೆ. ದೈನಂದಿನ ಬದುಕಿನಲ್ಲಿ ಕರಶುಚಿತ್ವದಿಂದಾಗುವ ಲಾಭಗಳ ಕುರಿತು ಜಗತ್ತಿಗೆ ಸಂದೇಶ ರವಾನಿಸುವ ಉದ್ದೇಶ ಹೊಂದಲಾಗಿದೆ. ಐಎಚ್‌ಎಚ್ ನಿಂದ ಸ್ವಚ್ಛ ಕೈಗಳಿಂದ ಆರೋಗ್ಯ ಉಳಿಸುವ ಉದ್ದೇಶವನ್ನು ಅಭಿಯಾನ ಒಳಗೊಂಡಿದ್ದು, ನಮ್ಮ ಸಮುದಾಯದ ಯೋಗಕ್ಷೇಮ ಮತ್ತು ಆರೋಗ್ಯವಂತ ಜಗತ್ತು ನರ‍್ಮಿಸಲು ಈ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು” ಎಂದರು.
