ಉದಯವಾಹಿನಿ, ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ೧ಕೋಟಿ ೩೦ಲಕ್ಷ ಜನರು ವಾಸವಿದ್ದಾರೆ .ಅಂದಾಜು ೨೮ಲಕ್ಷಕ್ಕೂ ಹೆಚ್ಚು ಆಸ್ತಿಗಳು ನಗರ ಪ್ರದೇಶದಲ್ಲಿ ಇವೆ.
ಸಮರ್ಪಕ ಕಾರ್ಯನಿರ್ವಹಿಸಲು ಕಂದಾಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಇತ್ತೀಚೆಗಿನ ದಿನಗಳಲ್ಲಿ ಕಂದಾಯ ಇಲಾಖೆಯ ಕಂದಾಯಾಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡದಿಂದ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ.
ಕಂದಾಯ ವಸೂಲಾತಿ, ಚುನಾವಣೆ ತಯಾರಿ, ಬೆಸ್ಕಾಂ ತೆರಿಗೆ ಮತ್ತು ಮನೆಗಳ ಸರ್ವೆ, ಇ.ಆಸ್ತಿ ಮತ್ತು ಸಕಾಲ, ಪೊಲೀಸ್ ಸೆನ್ಸಸ್, ಶಿಕ್ಷಕರ ಚುನಾವಣೆ ಹಾಗೂ ಮಾಹಿತಿ ಹಕ್ಕು ಈ ಎಲ್ಲ ಕೆಲಸ ನಿರ್ವಹಣೆ ಮಾಡಬೇಕು. ಪ್ರತಿ ದಿನ ೨೫ಮನೆಗಳಿಗೆ ಭೇಟಿ ಮತ್ತು ೨೫ಮನೆಗಳಿಗೆ ಸರ್ವೆ ಮಾಡಬೇಕು, ಚುನಾವಣೆ ಸಂಬಂಧಿಸಿದ ವಿಷಯದಲ್ಲಿ ಗಮನಹರಿಸಬೇಕು ಕಂದಾಯ ವಸೂಲಾತಿಯಾಗಬೇಕು ಇಷ್ಟೆಲ್ಲ ಕಾರ್ಯ ಮಾಡಲು ಸಮಯ ಮತ್ತು ಸಿಬ್ಬಂದಿಗಳ ಕೊರತೆ ಇದೆ ಎಂಬುದು ಅಧಿಕಾರಿಗಳ ಗೀಳು.
ಬಿಬಿಎಂಪಿ ಮೇಲಾಧಿಕಾರಿಗಳು ಇವೆಲ್ಲ ಸಮಸ್ಯೆಗಳ ಮಾಹಿತಿ ಇದ್ದರು ವಿನಾಕಾರಣ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಒತ್ತಡ ಹಾಕುತ್ತಾರೆ. ಮನುಷ್ಯ ಪ್ರತಿನಿತ್ಯ ಇಷ್ಟು ಗಂಟೆ ಕೆಲಸ ಮಾಡಬಹುದು, ಅತಿಯಾದ ಕೆಲಸ ಮಾನಸಿಕ ಒತ್ತಡದಿಂದ ಕಂದಾಯ ಇಲಾಖೆ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳು ಮಾನಸಿಕವಾಗಿ ನೊಂದು ಹೋಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!