ಉದಯವಾಹಿನಿ, ಕೋಲಾರ : ಅಕ್ಷರ ದಾಸೋಹ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆಯಲು ಕಾರಣಕರ್ತರಾಗಿರುವ ಅಡುಗೆ ಸಿಬ್ಬಂದಿಗೆ ಅಡುಗೆ ಶುಚಿತ್ವ, ಸುರಕ್ಷತೆ,ಸ್ವಚ್ಛತೆ, ಗುಣಮಟ್ಟ ಸೇರಿದಂತೆ ವಿವಿಧ ವಿಷಯಗಳ ತರಬೇತಿಯನ್ನು ಹತ್ತು ದಿನಗಳ ಕಾಲ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಸಿವಿ ತಿಮ್ಮರಾಯಪ್ಪ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಇಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ನಡೆಸಿದ ಅಡುಗೆ ಸಮಸ್ಯೆಗಳು ಮತ್ತು ಪರಿಹಾರ ಕುರಿತ ಸಮಾಲೋಚನಾ ಸಭೆಯಲ್ಲಿ ಸಮಸ್ಯೆಗಳ ಮನವಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಾದ್ಯಂತ ಯಾವುದೇ ಸಮಸ್ಯೆಯಲ್ಲಿ ಇಲ್ಲದೆ ಅಲ್ವಾ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಅಡುಗೆ ಸಿಬ್ಬಂದಿ ಅವರ ಸಹಕಾರ ಮುಖ್ಯವಾಗಿದ್ದು ಬೇಳೆ ಎಣ್ಣೆ ಇನ್ನೊಂದು ತಿಂಗಳಲ್ಲಿ ಸರಬರಾಜು ಆಗುವ ನಿರೀಕ್ಷೆಯಲ್ಲಿದ್ದೇವೆ ಎಂದರು. ಈಗಾಗಲೇ ಅಕ್ಕಿ ಸರಬರಾಜು . ಆಗಿದ್ದು ಶಾಲೆಗಳಿಗೆ ಕಳಿಸ್ಕೂಡಲಾಗುವುದು ಎಂದ ಅವರು ಮೊಟ್ಟೆ, ತರಕಾರಿ ವೆಚ್ಚ ಮಸಾಲೆ ಮತ್ತಿತರ ಸಾಮಗ್ರಿಗಳ ಹೆಚ್ಚು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಬಗ್ಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಚರ್ಚಿಸಲಾಗಿದೆ ಎಂದರು.
ಸರ್ಕಾರದ ಬಹು ನಿರೀಕ್ಷಿತ ರಾಗಿ ಮಾಲ್ಟ್ ಶಾಲೆಯ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಚಿಂತನೆ ಡಿಸೆಂಬರ್ ನಿಂದ ಜಾರಿ ಆಗಲಿದೆ ಎಂಬ ಇಂಗಿತ ವ್ಯಕ್ತಪಡಿಸಿದರು.
