ಉದಯವಾಹಿನಿ, ಬೆಂಗಳೂರು: ಅಖಿಲ ಭಾರತ ಶ್ವಾನ ಪ್ರದರ್ಶನ ಸ್ಙಿ ಹ್ಙಿಸ್ಙಿ ಚಾಂಪಿಯನ್‌ಶಿಪ್ ಡಿಸೆಂಬರ್ ೨ ಮತ್ತು ೩ ಹೆಬ್ಬಾಳದ ಪಶುವೈದ್ಯ ಕಾಲೇಜು ಕ್ಯಾಂಪಸ್‌ನಲ್ಲಿ ಸಿಲಿಕಾನ್‌ಸಿಟಿ ಕೆನಲ್ ಕ್ಲಬ್ ಹಾಗೂ ಬೆಂಗಳೂರ್ ಕೆನೈನ್ ಕ್ಲಬ್ ಆಯೋಜನೆ ಮಾಡಲಾಗಿದೆ.
ಉತ್ತರ ಕರ್ನಾಟಕದ ಅತ್ಯಂತ ಜನಪ್ರಿಯ ತಳಿಯಾಗಿರುವ ಮುಧೋಳ ನಾಯಿಗಳು ಇಲ್ಲಿ ಗಮನ ಸೆಳೆಯಲಿವೆ. ಪ್ರತಿಯೊಬ್ಬ ನಾಗರಿಕರ ಅಚ್ಚುಮೆಚ್ಚಿನ ಪ್ರಾಣಿ ನಾಯಿ. ಇತಿಹಾಸ ಪೂರ್ವದಿಂದಲೂ ಮನುಷ್ಯರೊಂದಿಗೆ ಇದರ ಬಾಂಧವ್ಯ ಇದೆ. ಕೋರೆಹಲ್ಲು ತಳಿಯ ನಾಯಿಯ ಕುರಿತು ಇನ್ನಷು ಜ್ಞಾನ ವೃದ್ಧಿಸಿಕೊಳ್ಳುವ ಹಾಗೂ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸಹಕಾರಿಯಾಗುವ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ನಗರದಲ್ಲಿ ಆಯೋಜಿಸಲಾಗಿದೆ.
ಬೆಂಗಳೂರು ಮೂಲದ ಸಿಲಿಕಾನ್ ಸಿಟಿ ಕೆನಲ್‌ಕ್ಲಬ್ ೧೨೭ ಹಾಗೂ ೧೨೮ ಹಾಗೂ ಬೆಂಗಳೂರು ಕನೈನ್ ಕ್ಲಬ್ (೫೫, ೫೬ನೇ) ನಿಂದ ಅಖಿಲ ಭಾರತ ಶ್ವಾನ ಪ್ರದರ್ಶನದ ಸ್ಪರ್ಧೆ ಆಯೋಜಿಸಿದೆ. ಕೋರೆಹಲ್ಲು ನಾಯಿಗಳ ಕುರಿತು ಜನಪ್ರಿಯತೆ ಮೂಡಿಸುವ ಸಲುವಾಗಿಯೇ ಈ ಸ್ಪರ್ಧೆ ಆಯೋಜಿಸಲಾಗಿದೆ.
ಸುಮಾರು ೫೦ ತಳಿಯ ೪೫೦ರಿಂದ ೫೦೦ ಶ್ವಾನಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ. ವಿಶೇಷ ತಳಿಯಾದ ಅಕಿತಾ, ಮಾಲ್ಟೀಸ್, ಸ್ಕಾನಜರ್, ಸೈಬೀರಿಯನ್ ಹಸ್ಕಿ, ಬೆಲ್ಜಿಯನ್ ಶೆಪರ್ಡ್ ನಾಯಿ, ಅಫಘಾನ್‌ಹೌಂಡ್ ಇನ್ನೂ ಹಲವು ತಳಿಯ ನಾಯಿಗಳಾದ ಜರ್ಮನ್ ಶೆಪರ್ಡ್, ಡಾಬರ್‌ಮನ್, ಲ್ಯಾಬ್ರಡಾರ್‌ರಿಟ್ರೈವರ್, ಗೋಲ್ಡನ್‌ರಿಟ್ರೈವರ್, ಬಾಕ್ಸರ್, ಗ್ರೇಟ್‌ಡೇನ್, ಕಾಕರ್ ಸ್ಪೈನಿಯೆಲ್ ಮತ್ತಿತರ ತಳಿಯ ಶ್ವಾನಗಳು ಪಾಲ್ಗೊಂಡು ತಮ್ಮ ಸೌಂದರ್ಯ, ಬುದ್ದಿಮತ್ತೆಯನ್ನು ಪ್ರದರ್ಶಿಸಲಿವೆ. ಉತ್ತರ ಕರ್ನಾಟಕದ ಅತ್ಯಂತಜನಪ್ರಿಯ ತಳಿಯಾಗಿರುವ ಮುಧೋಳ ನಾಯಿಗಳು ಇಲ್ಲಿ ಗಮನ ಸೆಳೆಯಲಿವೆ. ಹೆಚ್ಚಿನ ವಿವರಣೆಗಳಿಗೆ ಡಾ ನರೇಂದ್ರ ೯೯೭೨೦೯೬೧೬೮ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!