ಉದಯವಾಹಿನಿ, ಬೆಂಗಳೂರು: ಇಸ್ರೋ ಸಹಯೋಗದಲ್ಲಿ ಅಭಿವೃದ್ಧಿಪಡಿಸುತ್ತಿರುವ ನಿಸಾರ್ ಲೋ ಅರ್ಥ್ ಆರ್ಬಿಟ್ ವೀಕ್ಷಿಸುವುದಕ್ಕಾಗಿ ಭಾರತದ ಮೊದಲ ಗಗನಯಾತ್ರಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರೊಂದಿಗೆ ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಇಂದು ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಲಿದ್ದಾರೆ.
ನಿಸಾರ್ ಅನ್ನು ೨೦೨೪ರ ಮೊದಲ ತ್ರೈಮಾಸಿಕದಲ್ಲಿ ಉಡ್ಡಯನ ಮಾಡುವ ಯೋಜನೆ ಹೊಂದಲಾಗಿದೆ. ನಿಸಾರ್ ೧೨ ದಿನಗಳಲ್ಲಿ ಇಡೀ ಜಗತ್ತನ್ನು ನಕ್ಷೆ ಮಾಡಲಿದೆ.
ಭೂಮಿಯ ಪರಿಸರ ವ್ಯವಸ್ಥೆಗಳು, ಮಂಜಗಡ್ಡೆಯ ದ್ರವ್ಯರಾಶಿ, ಸಸ್ಯವರ್ಗದ ಜೀವರಾಶಿ, ಸಮುದ್ರ ಮಟ್ಟ ಏರಿಕೆ, ಅಂತರ್ಜಲ ಮತ್ತು ಭೂಕಂಪನಗಳು, ಸುನಾಮಿ, ಜ್ವಾಲಾಮುಖಿ ಮತ್ತು ಭುಕುಸಿತಗಳು ಸೇರಿ ನೈಸರ್ಗಿಕ ಅಪಾಯಗಳಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾದೇಶಿಕವಾರು ಮತ್ತು ತಾತ್ಕಾಲಿಕ ಸ್ಥಿರವಾದ ದತ್ತಾಂಶಗಳನ್ನು ನಿಸಾರ್ ಕಳುಹಿಸಿಕೊಡಲಿದೆ ಎಂದು ನೆಲ್ಸನ್ ಮಾಹಿತಿ ನೀಡಿದರು.
