ಉದಯವಾಹಿನಿ, ಬೆಂಗಳೂರು: ನಿರ್ದೇಶಕ ಸುಧೀರ್ ಅತ್ತಾವರ್ ನಿರ್ದೇಶನದ “ಮೃತ್ಯೋರ್ಮ” ಕನ್ನಡ ಚಿತ್ರಕ್ಕೆ ಮುಂಬೈನಲ್ಲಿ ನಡೆದ ” ಮೂನ್ ವೈಟ್” ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸೇರಿ ೪ ಪ್ರಶಸ್ತಿ ಬಾಚಿಕೊಂಡಿದೆ.“ಅತ್ಯುತ್ತಮ ಚಿತ್ರ” ನಿರ್ಮಾಪಕ ತ್ರಿವಿಕ್ರಮ ಸಪಲ್ಯ,ಅತ್ಯುತ್ತಮ ನಟಿ” ಸ್ಮಿತ (ನಿವೇದಿತ), ಅತ್ಯುತ್ತಮ ಹಿನ್ನೆಲೆ ಹಾಡಿಗಾಗಿ ಸಾಧನ ಸರ್ಗಂ ಇದೇ ಚಿತ್ರಕ್ಕಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ರಾಕೇಶ್ ಅಡಿಗ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು.
ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹಾರಾಷ್ಟ್ರ ರಮೇಶ್ ಬಯಾಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ ನೀಡಿ ಬಾಲಿವುಡ್ ನ ಖ್ಯಾತ ಲಿರಿಸಿಸ್ಟ್ ಸಮೀರ್ ರಿಗೆ ಜೀವಮಾನ ಸಾಧನ ಪ್ರಶಸ್ತಿ ನೀಡಿ ಗೌರವಿಸಿದರು. “ಮ್ರತ್ಯೋರ್ಮ” ಚಿತ್ರ ಒಟ್ಟು ೫ ವಿಭಾಗಗಳಲ್ಲಿ ಪ್ರಶಸ್ತಿಗಾಗಿ ನಾಮನಿರ್ದೇಶನ ಗೊಂಡಿತ್ತು. ಅದರಲ್ಲಿ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

 

Leave a Reply

Your email address will not be published. Required fields are marked *

error: Content is protected !!