ಉದಯವಾಹಿನಿ,ಕಲಬುರಗಿ: ನಗರದ ಆರಾಧನಾ ಪದವಿ ಪೂರ್ವ ಕಾಲೇಜು ಮತ್ತು ಎನ್‍ಎಸ್‍ಎಸ್ ಘಟಕದ ಅಡಿಯಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರದ ಚೇತನ್ ಕುಮಾರ್ ಗಾಂಗಜಿ ಅಧ್ಯಕ್ಷತೆಯಲ್ಲಿ ನೆರವೇರಿತು. ಕಾಲೇಜಿನ ಕನ್ನಡ ಉಪನ್ಯಾಸಕರಾದ ಮಾಣಿಕರಾವ್ ಊಡಗಿ ಅವರು ಕಾರ್ಯಕ್ರಮ ಕುರಿತ ಮಾತನಾಡಿ, ಕನಕದಾಸರು ದಾಸರಲ್ಲಿ ಶ್ರೇಷ್ಠ. ದಾಸರು ಮತ್ತು ಅವರ ಭಕ್ತಿ, ಅವರ ತ್ಯಾಗ ಮತ್ತು ಅವರ ಜೀವನವನ್ನು ಕುರಿತು ಮಕ್ಕಳಲ್ಲಿ ಪರಿಜ್ಞಾನ ಮೂಡಿಸಿದರು. ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಪ್ರಾರ್ಥನಾ ಗೀತೆಯನ್ನು ವಿದ್ಯಾರ್ಥಿನಿ ಕಲಾವತಿ ನೆರವೇರಿಸಿದಳು. ಕಾರ್ಯಕ್ರಮದ ಸಂಚಾಲನೆಯನ್ನು ಕಾಶಿನಾಥ್ ಪಾಟೀಲ್ ಉಪನ್ಯಾಸಕರು ನಡೆಸಿಕೊಟ್ಟರು ಹಾಗೂ ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ.ಅಂಬಾರಾಯ ಹಾಗರಗಿ ಹಾಗೂ ಭೀಮರಾವ್ ಪಾಟೀಲ್ ಆಡಳಿತ ಅಧಿಕಾರಿಗಳು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಗಾಯತ್ರಿ ಪಾಟೀಲ್, ಉಪನ್ಯಾಸಕ ವೃಂದದವರು ಮತ್ತು ಆರಾಧನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ರವೀಂದ್ರ ಕುಮಾರ್ ದೇಸಾಯಿ, ಚಿದಾನಂದ ಬಿಸನಾಳ, ರೇವಣಸಿದ್ದಪ್ಪ ಇವಣಿ, ಶಾಲೆಯ ಹಿರಿಯ ಶಿಕ್ಷಕ-ಶಿಕ್ಷಕಿಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
