ಉದಯವಾಹಿನಿ,ಬೆಂಗಳೂರು: ರಾಷ್ಟ್ರಕವಿ ಕುವೆಂಪು ಆಶಯದಂತೆ ನಟಿ ಪೂಜಾಗಾಂಧಿ ಅವರು ಮಂತ್ರ ಮಾಂಗಲ್ಯ ಪದ್ದತಿಯೊಂದಿಗೆ ಉದ್ಯಮಿ ವಿಜಯ್ ಘೋರ್ಪಡೆ ಅವರೊಂದಿಗೆ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ. ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಆಪ್ತರು, ಸ್ನೇಹಿತರು ಸಮ್ಮುಖದಲ್ಲಿ ವಿಜಯ್ ಘೋರ್ಪಡೆ ಅವರನ್ನು ಪತಿಯಾಗಿ ಸ್ವೀಕಾರ ಮಾಡುವ ಮೂಲಕ ಜೀವನದ ಹೊಸ ಇನ್ಸಿಂಗ್ಸ್ ಆರಂಭಿಸಿದ್ದಾರೆ.
ಚಿತ್ರನಟಿಯರು, ಸೆಲೆಬ್ರಿಟಿಗಳು ಅದ್ದೂರಿ ಮತ್ತು ಆಡಂಬರದಲ್ಲಿ ಮದುವೆಯಾಗುವ ಸಮಯದಲ್ಲಿ ನಟಿ ಪೂಜಾಗಾಂಧಿ ಅವರು ಸರಳವಾಗಿ ಮದುವೆಯಾಗುವ ಮೂಲಕ ಮಂತ್ರ ಮಾಂಗಲ್ಯ ಪದ್ದತಿಯೊಂದಿಗೆ ವಿವಾಹವಾಗುವ ಮೂಲಕ ಇತರಿಗೆ ಮಾದರಿಯಾಗಿದ್ದಾರೆ.
ಮದುವೆ ಮತ್ತು ಆರತಕ್ಷತೆ ಸಮಾರಂಭದಲ್ಲಿ ಹಲವು ಸ್ನೇಹಿತರು ಕುಟುಂಬದ ಸದಸ್ಯರು ಭಾಗಿಯಾಗುವ ಮೂಲಕ ನವ ದಂಪತಿಯನ್ನು ಹರಸಿ ಹಾರೈಸಿದ್ದು ನೂರ್ಕಾಲ ಬಾಳಲಿ ಎಂದು ಆಶೀರ್ವಾದ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!