ಉದಯವಾಹಿನಿ, ಬೆಳಗಾವಿ: ಬೆಳಗಾವಿಯ ಚಳಿಗಾಲದ ಅಧಿವೇಶನ ಎರಡನೇ ದಿನವಾದ ಇಂದೂ ಸಹ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಚಿವರು ಗೈರಾಗಿದ್ದಕ್ಕೆ ಮುಖ್ಯ ಸಚೇತಕ ಸಲೀಂ ಅಹ್ಮದ್ ಮೇಲೆ ಗರಂ ಆದರು.
ಪ್ರಶ್ನೋತ್ತರ ಕಲಾಪದ ವೇಳೆ ಇಲಾಖೆಗೆ ಸಂಬಂಧಿಸಿದ ಸಚಿವರು ಕಾಣದ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಭಾಪತಿ ಹೊರಟ್ಟಿ, ಯಾರು, ಯಾವ ಇಲಾಖೆ ಸಚಿವರು ಗೈರಾಗುತ್ತಾರೆ ಎಂದು ಸರ್ಕಾರದ ಪರವಾಗಿ ಮುಖ್ಯ ಸಚೇತಕರು ಮಾಹಿತಿ ನೀಡಬೇಕು ಅಲ್ಲವೇ ಎಂದು ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದರು.
