ಉದಯವಾಹಿನಿ, ಬೆಂಗಳೂರು: ಡಿ.೧೧ರಿಂದ ಎಲೆಕ್ಟ್ರಿಕ್ ರೈಲು ಹತ್ತುವ ಮೂಲಕ ಬೆಂಗಳೂರಿನ ಪ್ರಕೃತಿ ಪ್ರಿಯರು ನಗರದಿಂದ ೬೦ ಕಿ.ಮೀ ದೂರದಲ್ಲಿರುವ ಜನಪ್ರಿಯ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಪ್ರಯಾಣಿಸಿ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ನಡುವೆ ಸಂಚರಿಸುವ ಮೆಮು (ಮೇನ್ ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್) ರೈಲುಗಳನ್ನು ವಿಮಾನ ನಿಲ್ದಾಣ ಮಾರ್ಗದಲ್ಲಿ ವಿಸ್ತರಿಸುವುದಾಗಿ ನೈಋತ್ಯ ರೈಲ್ವೆ ಪ್ರಕಟಿಸಿದೆ.
೦೬೫೩೧/೦೬೫೩೨ ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್, ೦೬೫೩೫/೦೬೫೮೩ ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ, ಮತ್ತು ೦೬೫೯೩/೦೬೫೯೪ ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ರೈಲುಗಳು ಸಂಚರಿಸಲಿವೆ.
ಯಲಹಂಕ ಮತ್ತು ಚಿಕ್ಕಬಳ್ಳಾಪುರ ನಡುವಿನ ವಿದ್ಯುದ್ದೀಕರಣವು ಮಾರ್ಚ್ ೨೦೨೨ ರಲ್ಲಿ ಪೂರ್ಣಗೊಂಡಿತು, ಆದರೆ ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ಹಲವು ಕಾರಣಗಳಿಂದ ವಿಳಂಬ ಮಾಡಿದೆ. ಪ್ರಸ್ತುತ, ೦೬೩೮೭/೦೬೩೮೮ ಕೆಎಸ್‌ಆರ್ ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಡೀಸೆಲ್ ಮಲ್ಟಿಪಲ್ ಯುನಿಟ್ ಮತ್ತು ೧೬೫೪೯/೧೬೫೫೦ ಕೆಎಸ್‌ಆರ್ ಬೆಂಗಳೂರು – ಕೋಲಾರ- ಕೆಎಸ್‌ಆರ್ ಬೆಂಗಳೂರು ರೈಲುಗಳು ನಂದಿ ನಿಲ್ದಾಣದಲ್ಲಿ ನಿಲುಗಡೆ ಮಾಡಲಿದೆ.

 

Leave a Reply

Your email address will not be published. Required fields are marked *

error: Content is protected !!