ಉದಯವಾಹಿನಿ, ಚಿಕ್ಕಮಗಳೂರು: ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಆಸಿಡ್ ದಾಳಿ ನಡೆಸಿರುವ ಅಮಾನವೀಯ ಘಟನೆ ನರಸಿಂಹರಾಜಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ.
ನಾಯಿ ಮಾಲೀಕರ ಮೇಲೆ ಆಸಿಡ್ ದಾಳಿ ಮಾಡಿದ ಪಕ್ಕದ ಮನೆಯವರು ಕ್ರೌರ್ಯ ಮೆರೆದಿದ್ದಾರೆ, ತನ್ನ ಸಾಕಿದ ನಾಯಿ ಬೊಗಳಿದ್ದಕ್ಕೆ ಅದರ ಯಜಮಾನ ಸುಂದರ ನಾಯಿಗೆ ಬೈಗುಳ ಆರಂಭಿಸಿದ್ದಾನೆ, ಆದರೆ ಆತ ತಮಗೆ ಬೈಯುತ್ತಿದ್ದಾನೆ ಎಂದು ತಿಳಿದು ಪಕ್ಕದ ಮನೆಯವರು ಸುಂದರನ ಮುಖಕ್ಕೆ ಆಸಿಡ್ ಎರಚಿದ್ದಾರೆ, ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ಘಟನೆ ನಡೆದಿದ್ದು ಸುಂದರ್ ರಾಜ್ ಆಸಿಡ್ ದಾಳಿಗೆ ಒಳಗಾಗಿ ಪರಿಸ್ಥಿತಿ ಗಂಭೀರವಾಗಿದೆ. ಆತನ ಎಡಗಣ್ಣಿಗೆ ಗಂಭೀರ ಗಾಯಗಳಾಗಿದ್ದು, ಕಣ್ಣಿನ ಪದರ ಬದಲಿಸುವಂತೆ ವೈದ್ಯರ ಸೂಚನೆ ನೀಡಿದ್ದಾರಂತೆ , ಇದೀಗ ಗಾಯಾಳು ಸುಂದರ್ ರಾಜ್ ಶಿವಮೊಗ್ಗದ ಮೆಗ್ಹಾನ್ ಆಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!