ಉದಯವಾಹಿನಿ, ಸಿರುಗುಪ್ಪ: ನಗರದ ಸರಕಾರಿ ಬಾಲಕಿಯರ ಫ್ರೌಡ ಶಾಲೆಯ ಸಭಾಂಗಣದಲ್ಲಿ ಸಿರುಗುಪ್ಪ ತಾಲ್ಲೂಕಿನ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಗಣಿತ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮವನ್ನು ನಾಲ್ಕ ರಿಂದ ಏಳನೇ ತರಗತಿ ಬೋಧನೆ ಮಾಡುವ ಗಣಿತ ಶಿಕ್ಷಕರಿಗೆ ಮೂಲಭೂತ ಸಂಖ್ಯಾ ಜ್ಞಾನ ಮತ್ತು ಕಲಿಕಾ ಬಲವರ್ಧನೆ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ತಮ್ಮನ ಗೌಡ ಪಾಟೀಲ್ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ವಿದ್ಯಾರ್ಥಿಗಳಿಗೆ ಗಣಿತದ ಮೂಲ ಕ್ರಿಯೆಗಳನ್ನು ಕಲಿಸಬೇಕೆಂದು, ಶಿಕ್ಷಕರು ಸರಿಯಾದ ಬುನಾದಿ ಸಂಖ್ಯಾ ಜ್ಞಾನವನ್ನು ನೀಡಬೇಕು, ಗಣಿತ ಬೋಧನೆಯ ಗುರಿ ಮತ್ತು ಉದ್ದೇಶಗಳನ್ನು ಶಿಕ್ಷಕರಿಗೆ ತಿಳಿಸಿದರು, ನಾಲ್ಕರಿಂದ 7ನೇ ತರಗತಿ ಶಿಕ್ಷಕರಿಗೆ ಗಣಿತ ಕ್ರಿಯಾಯೋಜನೆಯ ಬಗ್ಗೆ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಖ್ಯೆಗಳು ಲೆಕ್ಕಗಳನ್ನು ಕಲಿಸುವ 70 ದಿನಗಳ ಕ್ರಿಯಾ ಯೋಜನೆ ಬಗ್ಗೆ ಮತ್ತು ಬೋಧನೆಯಲ್ಲಿ ವಿದ್ಯಾರ್ಥಿಗಳಿಗೆ ಎಫ್ ಎಲ್ ಏನ್ ಅಂಶಗಳನ್ನು ಕಲಿಸಬೇಕು ಅಂಕಿ ಸಂಖ್ಯೆಗಳು ಮಗ್ಗಿ ಗಣಿತದ ಮೂಲ ಕ್ರಿಯೆಗಳು ಭಿನ್ನರಾಶಿ ದಶಮಾಂಶ ಆಕೃತಿಗಳ ಗುರ್ತಿಸುವಿಕೆ ಬಗ್ಗೆ ತಿಳಿಸಿದರು. 8ರಿಂದ 10 ನೇ ತರಗತಿಯ ಶಿಕ್ಷಕರಿಗೆ ಯೋಗಾನಂದಯ್ಯ, ಮುರುಗನ್ ರವರು ಗಣಿತ ವಿಷಯದ ಎಫ್ ಎಲ್ ಏನ್ ಅಂಶಗಳು ಮೂಲ ಕ್ರಿಯೆಗಳ ಬಗ್ಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪಾಸಿಂಗ್ ಪ್ಯಾಕೇಜ್ ವಿಷಯದ ಬಗ್ಗೆ ಮತ್ತು ಎಸ್.ಎಸ್.ಎಲ್.ಸಿ ಉತ್ತಮ ಫಲಿತಾಂಶವನ್ನು ತರಲು ವಿಶೇಷವಾದ ಕ್ರಿಯಾ ಯೋಜನೆ ತಯಾರಿಸಿ ವಿಶೇಷ ಅವಧಿ ತರಗತಿ ನಿರ್ವಹಣೆ ಮಾಡಬೇಕೆಂದು ತಿಳಿಸಿದರು. ಡಯಟ್ನನ ಬಸವರಾಜ ವಿಷಯ ಪರಿವೀಕ್ಷಕರು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ವೆಂಕಟೇಶ ಯಾದವ್, ಮಾರೇಗೌಡ, ಚನ್ನಬಸವನಗೌಡ ಇಸಿಓ,ತರಬೇತಿ ತಾಲ್ಲೂಕಿನ ವಿವಿಧ ಶಾಲೆಯ 210 ಶಿಕ್ಷಕರು ಭಾಗವಹಿಸಿದ್ದರು
