ಉದಯವಾಹಿನಿ, ಬಂಗಾರಪೇಟೆ: ಬಂಗಾರಪೇಟೆ ತಾಲ್ಲೂಕಿನಾದ್ಯಂತ ಬೆಸ್ಕಾಂ ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿ.ಬಿ.ಐಗೆ ಒಪ್ಪಿಸಿ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಇಲಾಖೆಯ ಉಪ ಕರಣಗಳನ್ನು ದುರುಪಯೋಗ ಪಡಿಸಿಕೊಂಡಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಂಧನ ಮಂತ್ರಿಯನ್ನು ಒತ್ತಾಯಿಸಿ ಡಿ-೨೦ರ ಬುಧವಾರ ಇಲಾಖೆ ಮುಂದೆ ಬಾರ್‌ಕೋಲ್ ಚಳುವಳಿ ಮಾಡಲು ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ, ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪವರ್ ಮ್ಯಾನ್ ಎಂದು ಹೆಸರು ಪಡೆದಿರುವ ಬೆಸ್ಕಾಂ ಇಲಾಖೆ ಭ್ರಷ್ಟರ ಮ್ಯಾನ್ ಎಂಬ ಪಟ್ಟವನ್ನು ಕಟ್ಟಿಕೊಳ್ಳುವ ಮಟ್ಟಕ್ಕೆ ಹೆಜ್ಜೆ ಹೆಜ್ಜೆಗೂ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ಸರ್ಕಾರದಿಂದ ಬರುವ ವಿದ್ಯುತ್ ಉಪ ಯಂತ್ರಕರಣಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಪ್ರಭಾವಿ ರಾಜಕಾರಣಿಗಳ ಲೇಔಟ್ ಹಾಗೂ ವಾಣಿಜ್ಯ ಮಳಿಗೆಗಳಿಗೆ ಹಳೆಯ ಟಿ.ಸಿ. ವೈರ್‌ನ್ನು ಅಳವಡಿಸಿ ಹೊಸ ಟಿ.ಸಿ. ಖರೀದಿಸಿದಂತೆ ದಾಖಲೆಗಳನ್ನು ಸೃಷ್ಟಿ ಮಾಡಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆಂದು ಸಭೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಇಲಾಖೆಯ ವಿರುದ್ದ ಗಂಭೀರ ಆರೋಪವನ್ನು ಮಾಡಿದರು.
ಸಣ್ಣ ಪುಟ್ಟ ರೈತರು ತಮ್ಮ ಸ್ವಾಭಿಮಾನದ ಬದುಕಿಗಾಗಿ ಕೊಳವೆಬಾವಿಯನ್ನು ಕೊರೆಸಿಕೊಂಡು ಅದಕ್ಕೆ ವಿದ್ಯುತ್ ಸಂಪರ್ಕ ನೀಡುವಂತೆ ಇಲಾಖೆಗೆ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಿದರೂ ಕನಿಷ್ಟ ಸೌರ್ಜನ್ಯಕ್ಕಾದರೂ ಆ ರೈತನ ಕಡತವನ್ನು ಪರಿಶೀಲನೆ ಮಾಡದೆ ರೈತ ವಿರೋಧಿ ದೋರಣೆ ಅನುಸರಿಸುವ ಇಲಾಖೆಯ ಕೆಲವು ಭ್ರಷ್ಟ ಅದಿಕಾರಿಗಳು ಹೆಜ್ಜೆ ಹೆಜ್ಜೆಗೂ ರೈತರನ್ನು ಶೋಷಣೆ ಮಾಡಲು ದಲ್ಲಾಳಿಗಳನ್ನು ನೇಮಿಸಿಕೊಂಡು ಇಲಾಖೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಕಿಡಿಕಾರಿದರು.
